ಈ ಆಹಾರಗಳನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಡಿ, ಅದು ವಿಷವಾಗುತ್ತದೆ…..!

ಸಾಮಾನ್ಯವಾಗಿ ಎಲ್ಲರೂ ಎರಡು ಹೊತ್ತಿಗಾಗುವಷ್ಟು ಊಟವನ್ನು ಒಮ್ಮೆಲೇ ತಯಾರಿಸುತ್ತಾರೆ. ರಾತ್ರಿ ಅದನ್ನೇ ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಕೆಲವರು ತಿನಿಸುಗಳನ್ನು ಗ್ಯಾಸ್‌ನಲ್ಲಿ ಮತ್ತು ಕೆಲವರು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುತ್ತಾರೆ. ಮೈಕ್ರೊವೇವ್ ಆಹಾರಗಳನ್ನು ಬಿಸಿ ಮಾಡಲು ಹೇಳಿ ಮಾಡಿಸಿದಂತಿದೆ. ಆದರೆ ಮೈಕ್ರೊವೇವ್‌ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಮತ್ತೆ ಬಿಸಿ ಮಾಡುವುದರಿಂದ ಅವುಗಳ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯ ಕೆಡುತ್ತದೆ. 

ಫ್ರೆಂಚ್ ಫ್ರೈಸ್ ಮತ್ತು ರಿದ ಆಹಾರಗಳು- ಮೈಕ್ರೊವೇವ್‌ನಲ್ಲಿ ಕರಿದ ಆಹಾರಗಳು ಅಥವಾ ಫ್ರೆಂಚ್ ಫ್ರೈಗಳನ್ನು ಮತ್ತೆ ಬಿಸಿ ಮಾಡಬಾರದು. ಏಕೆಂದರೆ ಫ್ರೆಂಚ್ ಫ್ರೈಗಳನ್ನು  ಮೈಕ್ರೊವೇವ್‌ನಲ್ಲಿ ಬಿಸಿ ಮಾಡಿದರೆ ಅವು ಮೆತ್ತಗಾಗಿಬಿಡಬಹುದು. ಅವುಗಳ ರುಚಿ ಕೂಡ ಬದಲಾಗಬಹುದು.

ಮಾಂಸದ ಭಕ್ಷ್ಯ – ಹೆಚ್ಚಿನ ಜನರು ಮಾಂಸದ ಭಕ್ಷ್ಯಗಳನ್ನು ಬಿಸಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಮೈಕ್ರೊವೇವ್‌ನಲ್ಲಿ ಮಾಂಸವನ್ನು ಬಿಸಿ ಮಾಡಬಾರದು. ಇದರಿಂದ ತಿನಿಸುಗಳ ರುಚಿ ಕೆಡುತ್ತದೆ. ಅವುಗಳನ್ನು ಮೈಕ್ರೊವೇವ್‌ನಲ್ಲಿ ಬಿಸಿ ಮಾಡುವ ಬದಲು  ಗ್ರಿಲ್ ಅಥವಾ ಪ್ಯಾನ್‌ನಲ್ಲಿ ಫ್ರೈ ಮಾಡಬಹುದು.

ಮೊಟ್ಟೆ ಉತ್ಪನ್ನಗಳು – ಮೊಟ್ಟೆಯಿಂದ ತಯಾರಿಸಿದ ಆಹಾರವನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬಾರದು. ಮೊಟ್ಟೆ ಹಾಕಿ ಮಾಡಿದ ತಿನಿಸುಗಳನ್ನು ಬಿಸಿಯಾಗಿ ತಕ್ಷಣ ತಿನ್ನಿರಿ. ಅದನ್ನು ಮತ್ತೆ ಮೈಕ್ರೋವೇವ್‌ನಲ್ಲಿಟ್ಟು ಬಿಸಿ ಮಾಡಬೇಡಿ.

ಹಸಿರು ಸೊಪ್ಪು, ತರಕಾರಿಗಳು – ಪಾಲಕ್, ಮೆಂತ್ಯ ಮುಂತಾದ ಸೊಪ್ಪಿನಲ್ಲಿ ನೈಟ್ರೇಟ್ ಇರುತ್ತದೆ. ಇವುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿದಾಗ ಅದರಲ್ಲಿರುವ ನೈಟ್ರೇಟ್ ಹಾನಿಕಾರಕವಾಗಿ ಬದಲಾಗುತ್ತದೆ. ಇದು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read