ಈ ಅಪರೂಪದ ಜೋಡಿಗೆ ನೀವೂ ವಿಶ್ ಮಾಡಿ….!

ರಾಜಸ್ಥಾನ: ಪ್ರೀತಿ ಕುರುಡು, ಪ್ರೇಮ ಕುರುಡು ಅಂತಾರೆ. ಜೊತೆಗೆ ಯಾವುದೇ ಮದುವೆ ಅನ್ನೋದು ಋಣಾನುಬಂಧ ಅಂತಾರೆ. ಇದು ನಿಜಕ್ಕೂ ಸತ್ಯವಾದ ವಿಚಾರ. ಯಾಕಂದ್ರೆ ಈ ಪ್ರಪಂಚದಲ್ಲಿ ಅನೇಕ ಮದುವೆಗಳನ್ನು ನೋಡಿದಾಗ ಇದು ಸತ್ಯ ಅನ್ನಿಸುತ್ತೆ. ಇದೀಗ ಮಿನಿ ಜೋಡಿ ಎಂದೇ ಪ್ರಖ್ಯಾತವಾಗಿರುವ ಈ ಜೋಡಿಯ ಮದುವೆ ಕೂಡ ಹೀಗೆ. ಇದು ಸ್ವರ್ಗದಲ್ಲೇ ನಿಶ್ಚಯ ಆಗಿರೋದು.

ಹೌದು, ರಾಜಸ್ಥಾನದ ಜೋಧಪುರದಲ್ಲಿನ ಜೋಡಿ ಕಥೆ. ಸಾಕ್ಷಿ ಮತ್ತು ರಿಷಬ್‌ ಇಬ್ಬರ ದೇಹದ ಎತ್ತರ 3 ಅಡಿ 7 ಇಂಚುಗಳು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟೀವ್. ಬಿಕಾಂ ಮತ್ತು ಎಂಬಿಎ ಪದವಿ ಶಿಕ್ಷಣ ಮಾಡಿರುವ ಸಾಕ್ಷಿ ಸದ್ಯಕ್ಕೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡ್ತಾ ಇದ್ದಾರೆ. ಇನ್ನು ರಿಷಬ್ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯೋದಿಕ್ಕೆ ತಯಾರಾಗುತ್ತಿದ್ದಾರೆ.

ಮಿನಿ ಜೋಡಿ ಎಂದೇ ಫೇಮಸ್ ಆಗಿರುವ ಇವರು, ಜನವರಿ 26 ರಂದು ಮದುವೆಯಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಇವರ ಮದುವೆ ನಿಶ್ಚಯವಾಗಿದ್ದು. ಈಗ ಮದುವೆಯಾಗಿದ್ದಾರೆ. ಇನ್ನು ಸಾಕ್ಷಿ ಅವರು ರಿಷಬ್‌ನನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿದ್ದಾರೆ. ನಂತರ ಸ್ನೇಹ ಪ್ರೀತಿಗೆ ತಿರುಗಿ ಎರಡು ಮನೆಯ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಸಾಕ್ಷಿ- ರಿಷಬ್ ಇನ್‌ಸ್ಟಾದಲ್ಲಿ ಮಿನಿ ಕಪಲ್ ಎಂಬ ಐಡಿ ರಚಿಸಿದ್ದಾರೆ. ಇನ್‌ಸ್ಟಾ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ఈ మరుగుజ్జుల పెళ్లి అదుర్స్..​! వివాహ వీడియో సోషల్ మీడియాలో వైరల్.., social- media-favorites-jodhpur-mini-couple-wedding-in-rajasthan

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read