ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಸುಲಭದ ಟ್ರಿಕ್ಸ್‌…..!

ಈರುಳ್ಳಿಯನ್ನು ಕಣ್ಣೀರುಳ್ಳಿ ಎಂದೂ ಕರೆಯಲಾಗುತ್ತದೆ. ಯಾಕಂದ್ರೆ ಪ್ರತಿ ಬಾರಿ ಈರುಳ್ಳಿ ಹೆಚ್ಚುವಾಗಲೂ ಗೃಹಿಣಿಯರ ಕಣ್ಣಲ್ಲಿ ನೀರು ಬರುತ್ತದೆ. ಹಾಗಾಗಿ ಅಡುಗೆ ಮಾಡುವಾಗ ಈರುಳ್ಳಿ ಕತ್ತರಿಸುವುದು ತುಂಬಾ ಕಷ್ಟದ ಕೆಲಸ. ಕೆಲವೊಂದು ಸರಳವಾದ ವಿಧಾನಗಳ ಮೂಲಕ ಈರುಳ್ಳಿ ಕತ್ತರಿಸುವಾಗ ಬರುವ ಕಣ್ಣೀರನ್ನು ತಡೆಯಬಹುದು.

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಏಕೆ ಬರುತ್ತದೆ?

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಲು ಕಾರಣ ಅದರೊಳಗಿರುವ ಕಿಣ್ವಗಳು. ಈರುಳ್ಳಿಯನ್ನು ಕತ್ತರಿಸಿದಾಗ  ಅದರೊಳಗೆ ಇರುವ ಅನಿಲಗಳಲ್ಲಿ ಒಂದು ಹೊರಬರುತ್ತದೆ. ಇದರಿಂದ ಇದನ್ನು ಸೈ ಪ್ರೊಪನೆಥಿಯಲ್ ಆಕ್ಸೈಡ್ ಎಂದು ಕರೆಯಲಾಗುತ್ತದೆ. ಇದು ಮೂಗಿನ ಮೂಲಕ ಕಣ್ಣುಗಳ ಪೊರೆಯನ್ನು ಕೆರಳಿಸುತ್ತದೆ ಮತ್ತು ಕಣ್ಣುಗಳಿಂದ ಕಣ್ಣೀರು ಬರುತ್ತದೆ.

ಈರುಳ್ಳಿ ಕತ್ತರಿಸುವಾಗ ಕನ್ನಡಕವನ್ನು ಬಳಸಬಹುದು. ಇದು ಕಣ್ಣುಗಳಿಗೆ ಗಾಳಿ ಹೊಕ್ಕಲು ಬಿಡುವುದಿಲ್ಲ. ಈ ಮೂಲಕ ಕಣ್ಣೀರು ಬರದಂತೆ ತಡೆಯಬಹುದು. ಈರುಳ್ಳಿ ಸಿಪ್ಪೆ ತೆಗೆದ ನಂತರ ಅದನ್ನು ಮಧ್ಯದಿಂದ ಎರಡು ತುಂಡುಗಳಾಗಿ ಕತ್ತರಿಸಿ. ಅದನ್ನು ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಇಡಿ. 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಇಡಬೇಕು. ಈ ನೀರಿಗೆ ವೈಟ್‌ ವಿನೆಗರ್ ಅನ್ನು ಕೂಡ ಸೇರಿಸಬಹುದು. ಹೀಗೆ ಮಾಡುವುದರಿಂದ ಈರುಳ್ಳಿಯ ಕಿಣ್ವಗಳು ಬಿಡುಗಡೆಯಾಗುತ್ತವೆ, ಅದನ್ನು ಕತ್ತರಿಸುವಾಗ ಕಣ್ಣಿನಿಂದ ನೀರು ಬರುವುದಿಲ್ಲ.

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದನ್ನು ತಪ್ಪಿಸಲು, ಅದನ್ನು ಕತ್ತರಿಸುವ ಮೊದಲು 20 ರಿಂದ 25 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಈರುಳ್ಳಿಯಲ್ಲಿರುವ ಕಿಣ್ವದ ಪರಿಣಾಮ ಕೊನೆಗೊಳ್ಳುತ್ತದೆ ಮತ್ತು ಅದನ್ನು ಕತ್ತರಿಸಿದ ನಂತರ ಕಣ್ಣಿನಿಂದ ನೀರು ಬರುವುದಿಲ್ಲ. ಯಾವಾಗಲೂ ಹರಿತವಾದ ಚಾಕುವಿನಿಂದ ಈರುಳ್ಳಿ ಕತ್ತರಿಸಿ.

ಹರಿತವಾದ ಚಾಕುವಿನಿಂದ ಈರುಳ್ಳಿ ಕತ್ತರಿಸಿದಾಗ, ಈರುಳ್ಳಿಯ ಪದರವು ಕತ್ತರಿಸಲ್ಪಡುತ್ತದೆ. ಇವುಗಳಿಂದ ಕಡಿಮೆ ಕಿಣ್ವಗಳು ಹೊರಬರುತ್ತವೆ. ಈರುಳ್ಳಿಯನ್ನು ಕತ್ತರಿಸುವಾಗ ಹತ್ತಿರದಲ್ಲಿ ಮೇಣದಬತ್ತಿಯನ್ನು ಬೆಳಗಿಸಿದರೆ, ಅದರಿಂದ ಹೊರಬರುವ ಅನಿಲವು ಮೇಣದಬತ್ತಿಯೊಳಗೆ ಹೋಗುತ್ತದೆ. ಕಣ್ಣುಗಳಿಂದ ನೀರು ಬರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read