ಇಲ್ಲಿದೆ ಮೂಲವ್ಯಾಧಿ ಸಮಸ್ಯೆಗೆ ಮನೆ ಮದ್ದು

ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಇದರಲ್ಲಿ ಅನೇಕ ವಿಧಗಳಿವೆ. ಅಧ್ಯಯನದ ಪ್ರಕಾರ 50 ವರ್ಷದವರಲ್ಲಿ ಶೇಕಡಾ 50ರಷ್ಟು ಮಂದಿ ಈ ಖಾಯಿಲೆಯಿಂದ ಬಳಲುತ್ತಾರಂತೆ.

ಇದರ ಪ್ರಮುಖ ಸಮಸ್ಯೆ ಎಂದ್ರೆ ರೋಗದಿಂದ ಬಳಲುತ್ತಿರುವವರು ವೈದ್ಯರ ಬಳಿ ಹೋಗಲು ಬಯಸುವುದಿಲ್ಲ. ರೋಗದ ಬಗ್ಗೆ ಹೇಳಿಕೊಳ್ಳಲು ನಾಚಿಕೊಳ್ತಾರೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳತ್ತದೆ. ಆರಂಭದಲ್ಲಿ ಬರಿ ನೋವಾಗುತ್ತದೆ. ದಿನ ಕಳೆದಂತೆ ರಕ್ತ ಬರಲು ಶುರುವಾಗುತ್ತದೆ. ಆರಂಭದಲ್ಲಿಯೇ ಇದಕ್ಕೆ ಸೂಕ್ತ ಚಿಕಿತ್ಸೆ ದೊರೆತರೆ ಸಮಸ್ಯೆಯಿಂದ ಬೇಗ ಮುಕ್ತಿ ಪಡೆಯಬಹುದಾಗಿದೆ.

ಅಜೀರ್ಣ, ಮಲಬದ್ಧತೆ, ಭಾರಿ ಗಾತ್ರದ ವಸ್ತುಗಳನ್ನು ಎತ್ತುವುದು, ಗ್ಯಾಸ್ ಸಮಸ್ಯೆ, ಬೊಜ್ಜು ಹೀಗೆ ಅನೇಕ ಕಾರಣಗಳಿಂದ ಮೂಲವ್ಯಾಧಿ ಕಾಣಿಸಿಕೊಳ್ಳುತ್ತದೆ. ಈ ರೋಗದಿಂದ ಬಳಲುವ ಎಲ್ಲರಿಗೂ ಒಂದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಕೆಲವರಿಗೆ ನೋವು ಕಂಡು ಬಂದ್ರೆ ಮತ್ತೆ ಕೆಲವರಿಗೆ ತುರಿಕೆ ಕಾಣಿಸಿಕೊಳ್ಳುತ್ತದೆ. ಗುದದ್ವಾರದಲ್ಲಿ ನೋವು, ರಕ್ತ ಬರುವುದು, ಊತ ಹೀಗೆ ಬೇರೆ ಬೇರೆ ರೀತಿಯಲ್ಲಿ ಅದು ಹಿಂಸೆ ನೀಡುತ್ತದೆ.

ನಿಮಗೆ ನಂಬಲು ಅಸಾಧ್ಯವಾಗಬಹುದು. ಆದ್ರೆ ಮೂಲವ್ಯಾಧಿಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಔಷಧಿ ಇದೆ. 24 ಗಂಟೆಗಳೊಳಗಾಗಿ ನೀವು ಪೈಲ್ಸ್ ನಿಂದ ನೆಮ್ಮದಿ ಪಡೆಯಬಹುದಾಗಿದೆ. ಆಪಲ್ ಸೈಡರ್ ವಿನೆಗರ್ ನಿಮ್ಮ ಮೂಲವ್ಯಾಧಿ ಸಮಸ್ಯೆಗೆ ಮೂಲ ಮದ್ದು.

ಆಪಲ್ ಸೈಡರ್ ವಿನೆಗರ್ ನಲ್ಲಿ ಸೋಂಕನ್ನು ನಿಯಂತ್ರಿಸುವ ಗುಣವಿದೆ. ಅದು ಗುದನಾಳದ ನೋವನ್ನು ಕೂಡ ಕಡಿಮೆ ಮಾಡುತ್ತದೆ. ಊತ ಕಡಿಮೆ ಮಾಡಿ ಆರಾಮ ನೀಡುತ್ತದೆ.

  1. ಒಂದು ಪ್ಲೇಟ್ ನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ತೆಗೆದುಕೊಳ್ಳಿ.
  2. ಮೆದುವಾದ ಬಟ್ಟೆ ಅಥವಾ ಹತ್ತಿಯನ್ನು ತೆಗೆದುಕೊಳ್ಳಿ.
  3. ಆಪಲ್ ಸೈಡರ್ ವಿನೆಗರ್ ರನ್ನು ಹತ್ತಿಯಲ್ಲಿ ಅದ್ದಿ ನೋವಿರುವ ಜಾಗಕ್ಕೆ ಒತ್ತಿ.
  4. ನಿಮಗೆ ಆರಾಮ ಸಿಗುವವರೆಗೂ ಹೀಗೆ ಮಾಡುತ್ತಿರಿ.

ಪ್ರತಿದಿನ ಹೀಗೆ ಮಾಡುತ್ತ ಬಂದರೆ ಆದಷ್ಟು ಬೇಗ ನಿಮ್ಮ ಮೂಲವ್ಯಾಧಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read