ಇಲ್ಲಿದೆ ಮದುವೆ ಸಂದರ್ಭದಲ್ಲಿ ನಡೆದ ಎಡವಟ್ಟು ಘಟನೆಗಳ ವಿಡಿಯೋ…!

ಮದುವೆ ಸಮಯದಲ್ಲಿ ತಮಾಷೆಯ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿ ಮತ್ತೊಮ್ಮೆ ಅವುಗಳನ್ನ ನೋಡಿದಾಗ ನಮ್ಮ ಮುಖದಲ್ಲಿ ನಗು ಬರದೆ ಇರೋದಕ್ಕೆ ಸಾಧ್ಯನಾ? ಇತ್ತೀಚೆಗೆ ಇಂತಹ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಕಾಣಸಿಗುತ್ತವೆ. ನಿಮ್ಮ ಮದುವೆ ಅಥವಾ ಬೇರೆ ಯಾವುದಾದ್ರು ಸಂದಭ೯ದಲ್ಲಿ ಈ ರೀತಿ ಘಟನೆಗಳು ನಡೆದಿರಬಹುದು.

ಇಲ್ಲಿ ದಿಬ್ಬಣ ಹೊರಟ ಕಾರಿನಲ್ಲಿದ್ದ ವಧು ಕೆಳಗೆ ಬಿದ್ದಿದ್ದು ನಮಗೀಗ ತಮಾಷೆಯಾಗಿದೆ. ಇಲ್ಲಿ ನಾಯಿಯೊಂದು ವಧುವನ್ನೆ ಹುಡುಕಿಕೊಂಡು ಬಂದು ಗಲೀಜು ಮಾಡಿದಂತಿದೆ. ಇನ್ನು ಕೆಲವರು ಸ್ಟೇಜ್ ಮೇಲೆ ಕುಣಿದರೆ ಸುಮ್ನೆ ನಿಂತ್ರೇನೆ ಸ್ಟೇಜ್ ಬಿದ್ದು ಹೋಗುತ್ತೆ. ಇಲ್ಲೊಬ್ಬ ಮೆಟ್ಟಲನ್ನ ಎಲಿವೇಟರ್ ಅನ್ಕೊಂಡಿರಬೇಕು. ಈ ವಿಡಿಯೊದಲ್ಲಿ ಕೆಲವರು ನಡಿಯೊದನ್ನ ಈಗ ತಾನೆ ಕಲಿತಾ ಇರ್ಬೇಕು ಅಂತ ಅನಿಸುತ್ತೆ. ತಾವು ಮೊದಲು ನೆಟ್ಟಗೆ ನಿಲ್ಲೋದು ಕಲಿತು ಆಮೇಲೆ ಬೇರೆಯವರನ್ನ ಎತ್ತಾಡಿ ಸ್ವಾಮಿ ಅಂತ ಹೇಳಬೇಕು. ಕೇಕ್ ತಿನ್ಸೊ ನೆಪದಲ್ಲಿ ಬೀಳೊದ? ಕುದುರೆ ಮತ್ತೆ ಜಿರಾಫೆಗೆ ಸರಿಯಾಗಿ ತಿನ್ನೊಕ್ಕೆ ಕೊಟ್ಟಿಲ್ಲ ಅನ್ಸತ್ತೆ ಅದಿಕ್ಕೆ ಕೋಪ ಬಂದಿರ್ಬೇಕು.

ನಿಮ್ಮ ಮನಸ್ಸಲ್ಲಿ ಈ ವಿಡಿಯೊ ನೋಡಿ ಹೀಗೆ ಅನಿಸಿರಬಹುದು. ತಮಾಷೆಯ ಸನ್ನಿವೇಶಗಳು ಎಲ್ಲರ ಜೀವನದಲ್ಲೂ ನಡೆದಿರುತ್ತೆ. ಅವುಗಳನ್ನ ಮೆಲುಕು ಹಾಕ್ತಾ ವೈರಲ್ ಆಗಿರೊ ವಿಡಿಯೊ ನೋಡಿ ಒಮ್ಮೆ ನಕ್ಕು ಬಿಡಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read