ಇಲ್ಲಿದೆ ಬ್ಲಾಕ್ ಫಾರೆಸ್ಟ್ ಕೇಕ್ ನ ಇತಿಹಾಸ

ಬ್ಲ್ಯಾಕ್ ಫಾರೆಸ್ಟ್ ಕೇಕ್ ತಿನ್ನದೆ ಇರುವವರು ಯಾರಿದ್ದಾರೆ? ಇಲ್ಲ ಎನ್ನುವ ಉತ್ತರ ಬಹುಶಃ ಸಿಗದೇ ಇರಬಹುದು. ಆದರೆ ಈ ಕೇಕ್ ನ ಮೂಲ ಎಷ್ಟು ಜನರಿಗೆ ತಿಳಿದಿದೆ?

ಬ್ಲ್ಯಾಕ್ ಫಾರೆಸ್ಟ್ ಕೇಕ್ ನ ಮೂಲ ಜರ್ಮನಿ. ಬ್ಲ್ಯಾಕ್ ಫಾರೆಸ್ಟ್ ಎನ್ನುವುದು ಜರ್ಮನಿಯ ದಟ್ಟವಾದ ಅರಣ್ಯ ಪ್ರದೇಶ. ಸೂರ್ಯನ ಕಿರಣಗಳು ನೆಲದ ಮೇಲೆ ಬೀಳದೇ ಇರುವಷ್ಟು ದಟ್ಟವಾದ ಹಸಿರು ಇಲ್ಲಿ ಅವಿತುಕೊಂಡಿದೆ.

ಈ ಬ್ಲ್ಯಾಕ್ ಫಾರೆಸ್ಟ್ ನ ಪರ್ವತ ಶ್ರೇಣಿಯಲ್ಲಿ ಸಿಗುವ ಚೆರ್ರಿ ಹಣ್ಣಿನಿಂದ ಒಂದು ಬಗೆಯ ಮದ್ಯವನ್ನು ತಯಾರು ಮಾಡಲಾಗುತ್ತದೆ. ಈ ಮದ್ಯವನ್ನು ಕೇಕ್ ತಯಾರಿಸುವಾಗ ಸಾಮಾನ್ಯವಾಗಿ ಬಳಸುವುದರಿಂದ ಬ್ಲ್ಯಾಕ್ ಫಾರೆಸ್ಟ್ ಎಂಬ ಹೆಸರು ಬಂತು. ಕೇಕ್ ನ ಪದರಗಳ ನಡುವೆ ಚೆರ್ರಿ ಹಣ್ಣನ್ನು ಸಹಾ ಧಾರಾಳವಾಗಿ ಬಳಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read