ಇಲ್ಲಿದೆ ತಲೆ ಹೊಟ್ಟು ನಿವಾರಣೆಗೆ ಬೆಸ್ಟ್‌ ಟಿಪ್ಸ್

All Your Need To Know About Gummies For Your Healthy Hair - Plixlifeತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುತ್ತದೆ. ತಲೆಹೊಟ್ಟು ಕಾಣಿಸಿದರೆ ಕೆಮಿಕಲ್‌ ಇರುವ ಡ್ಯಾಂಡ್ರಫ್‌ ಫ್ರೀ ಶ್ಯಾಂಪೂ ಹಾಕುವ ಬದಲು ಈ ಟಿಪ್ಸ್‌ ಪಾಲಿಸಿದರೆ ತಲೆಹೊಟ್ಟು ಸಮಸ್ಯೆಯೂ ಇರುವುದಿಲ್ಲ, ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.

ಎಣ್ಣೆ ಮಸಾಜ್‌

ಕೂದಲಿನ ಬುಡ ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸುತ್ತದೆ. ಆದ್ದರಿಂದ ಕೂದಲಿಗೆ ಚೆನ್ನಾಗಿ ಎಣ್ಣೆ ಮಸಾಜ್‌ ಮಾಡಿ ಬಳಿಕ ಸ್ನಾನ ಮಾಡಿ. ಇದರಿಂದ ಕ್ರಮೇಣ ತಲೆಹೊಟ್ಟು ಕಡಿಮೆ ಆಗುತ್ತದೆ.

ಮೆಂತೆ

ಮೆಂತೆಯನ್ನು ರುಬ್ಬಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆ ಆಗುತ್ತದೆ.

ತಲೆ ಹೊಟ್ಟಿನಿಂದ ತಲೆ ತುಂಬಾ ತುರಿಸುತ್ತಿದೆಯೇ?

ಒಂದು ಕಪ್‌ ಬಿಸಿ ನೀರಿಗೆ ಸ್ವಲ್ಪ ಕಹಿಬೇವಿನ ಎಲೆ ಹಾಕಿ ಮಾರನೆಯ ದಿನ ಎಲೆಯನ್ನು ತೆಗೆದು, ಆ ನೀರಿನಿಂದ ತಲೆ ಬುಡಕ್ಕೆ ಮಸಾಜ್‌ ಮಾಡಿ ಅರ್ಧ ಗಂಟೆಯ ಬಳಿಕ ತಲೆಗೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ತಲೆ ತುರಿಕೆ ಬೇಗನೆ ಕಡಿಮೆಯಾಗುತ್ತದೆ.

ಮೆಹಂದಿ

ತಲೆಗೆ ಮೆಹಂದಿ ಹಾಕುವುದರಿಂದ ತಲೆಹೊಟ್ಟಿನ ಸಮಸ್ಯೆ ಇಲ್ಲವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read