ಇಲ್ಲಿದೆ ʼಬನಾನ – ಕೋಕನಟ್ʼ ಬ್ರೆಡ್ ತಯಾರಿಸುವ ವಿಧಾನ

ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ, ರುಚಿ ಶುಚಿಯಾಗಿ ಮಾಡಿಕೊಳ್ಳಬಹುದಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:
ಮೈದಾ-ಒಂದು ಕಪ್, ಮೊಸರು-ಒಂದು ಕಪ್‍, ಅಡುಗೆ ಸೋಡಾ-3/4 ಚಮಚ, ನಿಂಬೆರಸ-1 ಚಮಚ, ಹಣ್ಣಾಗಿರುವ ಎರಡು ಪಚ್ಚಬಾಳೆ ಹಣ್ಣು, ಉಪ್ಪು-ಅರ್ಧ ಚಮಚ, ಸಕ್ಕರೆ- ಒಂದು ಕಪ್, ಎಣ್ಣೆ- ಅರ್ಧ ಕಪ್, ಮೊಟ್ಟೆ- ಮೂರು, ಹುರಿದ ತೆಂಗಿನ ತುರಿ-ಅರ್ಧ ಕಪ್, ವೆನಿಲ್ಲಾ ಎಸೆನ್ಸ್-ಅರ್ಧ ಚಮಚ

ತಯಾರಿಸುವ ವಿಧಾನ:
ಓವೆನ್ ಅನ್ನು 350 ಡಿಗ್ರಿ ಉಷ್ಣತೆಗೆ ಬಿಸಿ ಮಾಡಿ, ಎಣ್ಣೆ ಮತ್ತು ಬ್ರೆಡ್ ಪ್ಯಾನ್ ತೆಗೆದುಕೊಂಡು ಪಕ್ಕದಲ್ಲಿಡಿ. ದೊಡ್ಡ ಬಟ್ಟಲಿನಲ್ಲಿ ಮೈದಾ, ಅಡುಗೆ ಸೋಡಾ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಇನ್ನೊಂದು ಬಟ್ಟಲಿನಲ್ಲಿ ಸಕ್ಕರೆ, ಮೊಟ್ಟೆ, ವೆನಿಲ್ಲಾ, ಎಣ್ಣೆ, ಮೊಸರು, ನಿಂಬೆರಸ ಹಾಕಿ ಚೆನ್ನಾಗಿ ಕಲಸಿರಿ, ನಂತರ ಕಲಸಿದ ಮೈದಾವನ್ನು ನಿಧಾನವಾಗಿ ಹಾಕಿ ಮಿಕ್ಸ್ ಮಾಡಿ, ಬಳಿಕ ಎಣ್ಣೆ ಹಾಕಿಟ್ಟಿರುವ ತಟ್ಟೆಗೆ ಸುರಿಯಿರಿ, ಅದರ ಮೇಲೆ ತೆಂಗಿನ ತುರಿಯನ್ನು ಉದುರಿಸಿ, ಮೂವತ್ತು ನಿಮಿಷ ಇಟ್ಟು ಅಲ್ಯುಮಿನಿಯಂ ಕವರ್ ಅನ್ನು ಮುಚ್ಚಿ ಮತ್ತೆ ಅರ್ಧ ಗಂಟೆ ಬೇಯಿಸಿ, ಬಳಿಕ ನೈಫ್ ನಿಂದ ಬೆಂದಿದೆಯೇ ಎಂದು ಪರೀಕ್ಷಿಸಿ, ಬೆಂದ ನಂತರ ಮೈಕ್ರೋ ಓವೆನ್ ನಿಂದ ಹೊರತೆಗೆದು ಹತ್ತು ನಿಮಿಷ ಹಾಗೆಯೇ ಇಡಿ.

ಆನಂತರ ಅದನ್ನು ಕತ್ತರಿಸಿ. ಇಷ್ಟು ಮಾಡಿದರೆ ರುಚಿಕರವಾದ ಬ್ರೆಡ್ ರೆಡಿಯಾಗುತ್ತದೆ. ಇದನ್ನು ಒಂದು ದಿನ ಇಟ್ಟು ತಿಂದರೆ ಹೆಚ್ಚು ರುಚಿಕರವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಹಾಕಿಟ್ಟರೆ ಈ ಬ್ರೆಡ್ ಅನ್ನು ಮೂರರಿಂದ ನಾಲ್ಕು ದಿನ ಕಾಲ ಇಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read