ಇಂತಹ ಗುಣಗಳ ಹೆಂಡತಿ ಸಿಕ್ಕ ಪುರುಷರು ಭಾಗ್ಯಶಾಲಿಗಳು

ಒಂದು ಹೆಣ್ಣು ಮನೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತಳಾಗಿರುತ್ತಾಳೆ. ಹಾಗೆಯೇ ಕೆಲ ಮಹಿಳೆಯರ ಸ್ವಭಾವ ಮನೆ ಮುರಿದು ಬೀಳಲು ಕಾರಣವಾಗುತ್ತದೆ.  ಒಟ್ಟಿನಲ್ಲಿ ಮನೆಗೆ ಒಳಿತಾಗಲೀ, ಕೆಡುಕಾಗಲೀ ಅದಕ್ಕೆ ಕಾರಣ ಹೆಣ್ಣಿನ ಸ್ವಭಾವವಾಗಿರುತ್ತದೆ. ಆಚಾರ್ಯ ಚಾಣಕ್ಯರ ನೀತಿ ಕೂಡ ಇದನ್ನೇ ಹೇಳುತ್ತದೆ. ಚಾಣಕ್ಯ ನೀತಿಯ ಪ್ರಕಾರ ಹೆಂಡತಿಯಲ್ಲಿರುವ ಕೆಲ ಗುಣಗಳು ಕುಟುಂಬವನ್ನು ಸಂತೋಷವಾಗಿಡುತ್ತದೆ ಮತ್ತು ಕಷ್ಟಗಳು ಬಹುಬೇಗ ದೂರವಾಗಿ ಮಕ್ಕಳು ಕೂಡ ಯಶಸ್ವಿ ಜೀವನ ನಡೆಸುತ್ತಾರೆ.

ಒಬ್ಬ ಸುಶಿಕ್ಷಿತ ಮತ್ತು ಧರ್ಮ ಗ್ರಂಥಗಳ ಕುರಿತು ಜ್ಞಾನ ಹೊಂದಿರುವ ಸ್ತ್ರೀ ತಾನು ಕೂಡ ಒಳ್ಳೆಯ ದಾರಿಯಲ್ಲಿ ನಡೆದು ಮಕ್ಕಳಿಗೂ ಒಳ್ಳೆಯ ಸಂಸ್ಕಾರ ಕೊಡುತ್ತಾಳೆ. ಅವಳಿಗೆ ಸರಿ ತಪ್ಪಿನ ತಿಳುವಳಿಕೆ ಕೂಡ ಚೆನ್ನಾಗಿರುತ್ತದೆ. ಹಾಗಾಗಿ ಅಂತಹ ಮಹಿಳೆಯಿರುವ ಮನೆ ಯಾವಾಗಲೂ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುತ್ತದೆ ಮತ್ತು ಮನೆಯಲ್ಲೂ ನೆಮ್ಮದಿ ನೆಲೆಸಿರುತ್ತದೆ.

ಪುರುಷರ ದುಡಿಮೆಯನ್ನು ಪೂರ್ತಿಯಾಗಿ ಖರ್ಚು ಮಾಡದೇ ಉಳಿತಾಯ ಮಾಡುವ ಮಹಿಳೆಯನ್ನು ಹೊಂದಿರುವ ಪುರುಷರು ಕೂಡ ಭಾಗ್ಯಶಾಲಿಗಳಾಗಿರುತ್ತಾರೆ. ಏಕೆಂದರೆ ಹಣವನ್ನು ಉಳಿಸುವ ಮಹಿಳೆ ಎಂತಹ ಕಠಿಣ ಸಂದರ್ಭದಲ್ಲೂ ಮನೆಯವರು ಇನ್ನೊಬ್ಬರ ಬಳಿ ಕೈಯೊಡ್ಡುವಂತೆ ಮಾಡುವುದಿಲ್ಲ.

ಸುತ್ತ ಮುತ್ತಲ ಜನರೊಂದಿಗೆ, ಸಮಾಜದೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ ಮಹಿಳೆಯ ಕುಟುಂಬದ ಜೊತೆ ಜನರು, ಸಂಬಂಧಿಗಳು ಬೆಸೆದುಕೊಂಡಿರುತ್ತಾರೆ. ಅಂತಹ ಮನೆಗೆ ಸಂಬಂಧಿಗಳು, ಸಂತರು ಖುಷಿಯಿಂದ ಬಂದು ಆಶೀರ್ವದಿಸುತ್ತಾರೆ.

ಎಲ್ಲ ಕಷ್ಟಗಳನ್ನು, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಮಹಿಳೆಯನ್ನು ಹೊಂದಿದ ಪುರುಷ ತುಂಬ ಭಾಗ್ಯಶಾಲಿಯಾಗಿರುತ್ತಾನೆ. ಅಂತಹ ಧೈರ್ಯಶಾಲಿ ಹೆಂಡತಿ ಜೊತೆಗಿದ್ದರೆ, ಗಂಡ ಎಂತಹ ಕಠಿಣ ಪರಿಸ್ಥಿತಿಯನ್ನು ಕೂಡ ಎದುರಿಸುತ್ತಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read