ಆರ್ಮಿ ಕ್ಯಾಂಟೀನ್‌ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ ಸರಕುಗಳು, ಇದರ ಹಿಂದಿನ ವಿಶೇಷ ಕಾರಣ ಏನು ಗೊತ್ತಾ ?

ನಮ್ಮ ಸೈನಿಕರು ಪ್ರತಿ ಕ್ಷಣವೂ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುತ್ತಾರೆ. ಬಯಸಿದರೂ ಈ ಉಪಕಾರಕ್ಕೆ ಪ್ರತಿಯಾಗಿ ಏನನ್ನೂ ಮಾಡಲು ನಮ್ಮಿಂದ ಎಂದಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಭಾರತ ಸರ್ಕಾರವು ದೇಶದ ವೀರ ಸೈನಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಯೋಧರ ಕುಟುಂಬಸ್ಥರಿಗೆ ಇದರಿಂದ ಅನುಕೂಲವಾಗುತ್ತದೆ. ಈ ಸೌಲಭ್ಯಗಳ ಪೈಕಿ ಸೇನಾ ಕ್ಯಾಂಟೀನ್ ಬಗ್ಗೆ ನೀವು ಕೇಳಿರಬೇಕು.

ಈ ಆರ್ಮಿ ಕ್ಯಾಂಟೀನ್‌ಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಸಾಮಾನುಗಳಿಗಿಂತ ಕಡಿಮೆ ದರದಲ್ಲಿ ಸರಕು ದೊರೆಯುತ್ತದೆ. ಬಯಸಿದರೆ ಇಲ್ಲಿಂದ ಕಾರುಗಳು ಮತ್ತು ಬೈಕ್‌ಗಳನ್ನು ಸಹ ಖರೀದಿಸಬಹುದು, ಇದರಲ್ಲಿ ನಿಮಗೆ ಉತ್ತಮ ರಿಯಾಯಿತಿ ಸಿಗುತ್ತದೆ. ಸೇನಾ ಕ್ಯಾಂಟೀನ್‌ನಲ್ಲಿ ಸರಕುಗಳು ಎಷ್ಟು ಅಗ್ಗವಾಗಿವೆ ಮತ್ತು ಸಾಮಾನ್ಯ ವ್ಯಕ್ತಿಯೂ ಇಲ್ಲಿಂದ ಸರಕುಗಳನ್ನು ಖರೀದಿಸಬಹುದೇ ಎಂಬುದು ಪ್ರಶ್ನೆ.

ಆರ್ಮಿ ಕ್ಯಾಂಟೀನ್‌ನ ಅಧಿಕೃತ ಹೆಸರು ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್. ಇಲ್ಲಿ ಭಾರತೀಯ ಸೇನೆಯ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಅತ್ಯಂತ ಅಗ್ಗದ ಬೆಲೆಯಲ್ಲಿ ಸರಕುಗಳು ಲಭ್ಯವಿವೆ. ಸೇನಾ ಕ್ಯಾಂಟೀನ್‌ನಲ್ಲಿ ನೀವು ದಿನಸಿ ವಸ್ತುಗಳು, ಅಡಿಗೆ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಆಟೋಮೊಬೈಲ್‌ಗಳು ಮತ್ತು ಮದ್ಯವನ್ನು ಸಹ ಖರೀದಿಸಬಹುದು. ಇಲ್ಲಿ ಅನೇಕ ವಿದೇಶಿ ವಸ್ತುಗಳೂ ದೊರೆಯುತ್ತವೆ.

ಲೇಹ್‌ನಿಂದ ಅಂಡಮಾನ್ ಮತ್ತು ನಿಕೋಬಾರ್‌ವರೆಗೆ ದೇಶದಾದ್ಯಂತ ಒಟ್ಟು 33 ಸೇನಾ ಕ್ಯಾಂಟೀನ್ ಡಿಪೋಗಳಿವೆ ಮತ್ತು ಸುಮಾರು 3700 ಯುನಿಟ್ ರನ್ ಕ್ಯಾಂಟೀನ್‌ಗಳಿವೆ. ಇಲ್ಲಿ ಸೈನಿಕರಿಂದ ಪ್ರತಿ ವಸ್ತುವಿನ ಮೇಲೆ ಕೇವಲ 50 ಪ್ರತಿಶತ ತೆರಿಗೆ ತೆಗೆದುಕೊಳ್ಳಲಾಗುತ್ತದೆ. ಬೇರೆ ಕಡೆ ಶೇ.18ರಷ್ಟು ತೆರಿಗೆ ಇದ್ದರೆ, ಆರ್ಮಿ ಕ್ಯಾಂಟೀನ್‌ನಲ್ಲಿ ಆ ವಸ್ತುವಿಗೆ ಕೇವಲ 9 ಪ್ರತಿಶತ ತೆರಿಗೆ ಹಾಕಲಾಗುತ್ತದೆ. ಹಾಗಾಗಿಯೇ ಇಲ್ಲಿನ ಸರಕುಗಳು ಮಾರುಕಟ್ಟೆಗಿಂತ ಅಗ್ಗವಾಗಿವೆ.

ಸರಕುಗಳ ಖರೀದಿಗೆ ಮಿತಿ!

ಮೊದಲು ಯಾವುದೇ ವ್ಯಕ್ತಿ ಆರ್ಮಿ ಕ್ಯಾಂಟೀನ್‌ನಿಂದ ಕಾರ್ಡ್ ಮೂಲಕ ಎಷ್ಟು ಬೇಕಾದರೂ ಖರೀದಿ ಮಾಡಬಹುದಿತ್ತು. ಆದರೆ ಸರಕುಗಳು ಯೋಧರ ಕುಟುಂಬಸ್ಥರಿಗೇ ಸಿಗದಂತಾದಾಗ ಮಿತಿ ಹೇರಲಾಯ್ತು. ಸದ್ಯ ಒಬ್ಬ ವ್ಯಕ್ತಿಯು ಪ್ರತಿ ತಿಂಗಳು ಮಿತಿಯೊಳಗೆ ಸರಕುಗಳನ್ನು ಇಲ್ಲಿ ಖರೀದಿಸಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read