ಆರ್ಥಿಕ ಕುಸಿತದ ನಡುವೆಯೂ ಈ ದೇಶದಲ್ಲಿ ಜೋರಾಗಿದೆ ಕಾಂಡೋಮ್ ಮಾರಾಟದ ಭರಾಟೆ…..!

ಚೀನಾದಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ. ಬಹುತೇಕ ಇಡೀ ಜಗತ್ತಿನಲ್ಲಿ ಬಳಸುವ ಆಟಿಕೆಗಳು, ಪ್ಲಾಸ್ಟಿಕ್‌ ಸಾಮಾನುಗಳು, ವಿದ್ಯುತ್‌ ಉಪಕರಣಗಳೆಲ್ಲ ತಯಾರಾಗೋದು ಚೀನಾದಲ್ಲಿ. ಆದ್ರೀಗ ಚೀನಾದ ಮಾರುಕಟ್ಟೆಗಳಲ್ಲಿ ಬೇರೆಯದ್ದೇ ಕ್ರೇಝ್‌ ಶುರುವಾಗಿದೆ. ಚೀನಿಯರು ಕಾಂಡೋಮ್‌ ಅನ್ನು ಭರಾಟೆಯಲ್ಲಿ ಖರೀದಿ ಮಾಡ್ತಿದ್ದಾರೆ. ಡ್ಯೂರೆಕ್ಸ್ ತಯಾರಿಸುವ ರೆಕಿಟ್ ಕಂಪನಿ ಈ ವಿಚಾರವನ್ನು ಬಹಿರಂಗಪಡಿಸಿದೆ.

ಒಂದೆಡೆ ಚೀನಾದ ದುರ್ಬಲ ಆರ್ಥಿಕತೆ ಭೀತಿ ತಂದಿಟ್ಟಿದ್ದು, ಮತ್ತೊಂದೆಡೆ ಕಾಂಡೋಮ್ ಮಾರುಕಟ್ಟೆ ಶರವೇಗ ಪಡೆದುಕೊಂಡಿದೆ. ಚೀನಾದಲ್ಲಿ ಎರಡನೇ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳ ಪ್ರಕಾರ ಜೂನ್ ಅಂತ್ಯದ ವೇಳೆಗೆ ಆರ್ಥಿಕತೆಯು ಶೇ. 6.3ರ ದರದಲ್ಲಿ ಬೆಳವಣಿಗೆಯಾಗಿದೆ. ಆದರೆ ಚಿಲ್ಲರೆ ವಲಯದಲ್ಲಿ ಈ ವೇಗವು ಶೇ.3.1 ರಷ್ಟಿದೆ. ಕೋವಿಡ್ ನಂತರ ಚೀನಾದ ಮಾರುಕಟ್ಟೆ ಚೇತರಿಸಿಕೊಂಡಿದೆ, ಆದರೆ ನಿರೀಕ್ಷೆಯಷ್ಟು ಬೆಳವಣಿಗೆ ಆಗಿಲ್ಲ.

ವಹಿವಾಟಿನಲ್ಲಿ ಇಳಿಕೆಯಾಗದಿರುವ ಏಕೈಕ ಮಾರುಕಟ್ಟೆಯೆಂದರೆ ಕಾಂಡೋಮ್‌ನದ್ದು. ಉಳಿದ ಕ್ಷೇತ್ರಗಳಲ್ಲಿ ರಫ್ತು ಕುಸಿತದಿಂದಾಗಿ ಗ್ರಾಹಕರು ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ. ಆದರೆ ಕಾಂಡೋಮ್‌ ಮಾರಾಟದಲ್ಲಿ 8.8 ಪ್ರತಿಶತದಷ್ಟು ಹೆಚ್ಚಳವಾಗಿದೆ. ಕಾಂಡೋಮ್‌ನಲ್ಲೂ ಹೊಸ ಹೊಸ ಪ್ರಯೋಗಕ್ಕೆ ಚೀನಿಯರು ಮುಂದಾಗುತ್ತಿದ್ದಾರೆ ಎನ್ನಲಾಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read