ಆರೋಗ್ಯ ಸ್ನೇಹಿ ʼಪುದೀನಾʼದಿಂದ ಇದೆ ಇಷ್ಟೆಲ್ಲಾ ಪ್ರಯೋಜನ….!

ಮಸಾಲೆ ಪದಾರ್ಥಗಳು, ಘಾಟದ ಆಹಾರದಲ್ಲಿ ಪುದೀನಾ ಎಲೆಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಎಲೆಗಳನ್ನು ಅಡುಗೆಗೆ ಬಳಸಿದ್ದರೂ ಬಹಳಷ್ಟು ಮಂದಿ ಕರಿಬೇವಿನಂತೆ ಪಕ್ಕಕ್ಕಿಟ್ಟು ಬಿಡುತ್ತಾರೆ. ಇದರಲ್ಲಿ ಆರೋಗ್ಯ ಸ್ನೇಹಿ ಅಂಶಗಳು ಹೇರಳವಾಗಿವೆ.

ಇವುಗಳಲ್ಲಿ ಒಳಿತು ಉಂಟು ಮಾಡುವ ಪೋಷಕಾಂಶಗಳು ಅಪಾರ ಪ್ರಮಾಣದಲ್ಲಿ ಸಿಗುವುದರಿಂದ ಮನೆಯಲ್ಲಿ ಬೆಳೆಸಿಕೊಳ್ಳಲು ಬಹಳಷ್ಟು ಜನರು ಆದ್ಯತೆ ನೀಡುತ್ತಾರೆ. ಆರೋಗ್ಯ ಸ್ನೇಹಿ ಅಂಶಗಳನ್ನು ಹೊರತುಪಡಿಸಿ ಇನ್ನೂ ಅನೇಕ ಪ್ರಯೋಜನಗಳು ಇದರಿಂದ ಲಭ್ಯವಿದೆ.

ಅವುಗಳೆಂದರೆ ಈ ಗಿಡಗಳನ್ನು ಮನೆ ಮುಂದೆ ಅಥವಾ ಅಡುಗೆ ಕೋಣೆಯಲ್ಲಿ ಇಟ್ಟಾಗ ಇರುವೆ, ಕೀಟಗಳು ಬರದು. ಪುದೀನಾ ಎಲೆಯಿಂದ ಹೊರ ಹೊಮ್ಮುವ ಅರೋಮಾ ಸುವಾಸನೆಯಿಂದ ದೂರವಾಗುತ್ತವೆ. ಅದೇ ರೀತಿ ಮನೆಯಲ್ಲಿ ಸಿಹಿಯಾದ ಪದಾರ್ಥಗಳು ಶೇಖರಿಸಿ ಇಟ್ಟ ಡಬ್ಬದ ಮೇಲೆ ಪುದೀನಾ ಎಲೆಗಳನ್ನು ಹಾಕಿ ನೋಡಿ. ಫಲಿತಾಂಶದ ಅರಿವು ನಿಮಗಾಗುತ್ತದೆ. ಕೀಟಗಳ ಕಾಟದಿಂದ ಮುಕ್ತಿ ಹೊಂದಲು ಪುದೀನಾ ಅತ್ಯಂತ ಸುಲಭ ಪರಿಹಾರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read