ಆರೋಗ್ಯದ ಕಾಳಜಿ ವಹಿಸುತ್ತದೆ ಏಲಕ್ಕಿ ಚಹಾ

ಕೊರೋನಾ ಬಂದ ಬಳಿಕ ಹಲವು ಬಗೆ ಕಷಾಯ, ಚಹಾಗಳನ್ನು ನೀವು ತಯಾರಿಸಿ ಕುಡಿದಿರುವುದು ಖಚಿತ. ಆದರೆ ಏಲಕ್ಕಿ ಚಹಾದ ಬಗ್ಗೆ ನೀವು ಕೇಳಿದ್ದೀರಾ?

ಇದರಲ್ಲಿ ಪೊಟ್ಯಾಸಿಯಂ, ಮೆಗ್ನೀಸಿಯಂ ಸೇರಿದಂತೆ ಹಲವು ಆರೋಗ್ಯಕರ ಅಂಶಗಳಿದ್ದು ಇದು ದೇಹ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಇದು ನೆರವಾಗುತ್ತದೆ.

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ರಕ್ತಪರಿಚಲನೆಯನ್ನು ಸರಾಗಗೊಳಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಆರೋಗ್ಯದ ಕಾಳಜಿ ವಹಿಸುತ್ತದೆ. ವಾಕರಿಕೆ ಲಕ್ಷಣಗಳನ್ನು ದೂರ ಮಾಡುತ್ತದೆ.

ಏಲಕ್ಕಿ ಚಹಾ ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇದನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು. ಹೆಚ್ಚು ಕುಡಿಯುವುದು ಒಳ್ಳೆಯದಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read