ಜೀರ್ಣಸಂಬಂಧಿ ಸಮಸ್ಯೆ ದೂರ ಮಾಡುತ್ತೆ ಜೀರಿಗೆ ನೀರು

ಜೀರಿಗೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಹಲವು ಉಪಕಾರವಿದೆ. ಆದರೆ ಅದು ಇತಿಮಿತಿಯಲ್ಲಿರಲಿ. ಅತಿಯಾಗಿ ಸೇವಿಸುವುದರಿಂದ ಎದೆಯುರಿ, ತೇಗು ಬರುವುದು ಕಂಡು ಬರಬಹುದು.

ಜೀರಿಗೆ ಕರುಳಿನಲ್ಲಿ ಜೀರ್ಣವಾಗದೆ ಉಳಿದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಹಾಗಾಗಿ ಮಲಬದ್ಧತೆ ಮೊದಲಾದ ಜೀರ್ಣಸಂಬಂಧಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ನಿದ್ದೆ ಇಲ್ಲದೆ ಬಳಲುತ್ತಿರುವವರಿಗೂ ಜೀರಿಗೆ ಕಷಾಯ ಹೇಳಿ ಮಾಡಿಸಿದ ಮದ್ದು. ಬಾಳೆಹಣ್ಣನ್ನು ಪ್ರತಿದಿನ ರಾತ್ರಿ ಊಟದ ಬಳಿಕ ಮಲಗುವ ಮುಂಚೆ ತಿನ್ನುವುದಿಂದ ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ಕಾಡುವುದೇ ಇಲ್ಲ. 60 ವರ್ಷ ಮೇಲ್ಪಟ್ಟವರೂ ಈ ಪ್ರಯೋಗವನ್ನು ಮಾಡಿ ನೋಡಬಹುದು.

ಇದರ ಬದಲು ಜೀರಿಗೆ ಹುರಿದು ಬಿಸಿ ನೀರಿಗೆ ಹಾಕಿ ಸ್ವಲ್ಪ ಸಕ್ಕರೆ/ಬೆಲ್ಲ ಬೆರೆಸಿ ಪಕ್ಕಕ್ಕಿಡಿ. ಐದು ನಿಮಿಷಗಳ ಬಳಿಕ ಚೆನ್ನಾಗಿ ಕುದಿಸಿ ಚಹಾ ತಯಾರಿಸಿ. ಸೋಸಿ. ಮಲಗುವ ಮುನ್ನ ಕುಡಿಯಿರಿ. ಬಳಿಕ ಆರಾಮವಾಗಿ ನಿದ್ರಿಸಬಹುದು.

ಎರಡು ಚಮಚ ಜೀರಿಗೆಯನ್ನು ರಾತ್ರಿ ನೆನೆಸಿಡಿ. ಬೆಳಿಗ್ಗೆ ನೀರನ್ನು ಸೋಸಿ ಅರ್ಧ ಚಮಚ ಲಿಂಬೆ ರಸ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದಲ್ಲಿ ಜೀರ್ಣಕ್ರಿಯೆ ಹೆಚ್ಚುತ್ತದೆ. ವಿಷಕಾರಿ ಅಂಶ ದೇಹದಿಂದ ಹೊರಹಾಕಲ್ಪಡುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಹಲವು ಇತರ ಪ್ರಯೋಜನಗಳೂ ನಿಮಗೆ ಸಿಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read