ಆಪಲ್‌ ಕಂಪನಿಯ ಸ್ಟೀವ್ ಜಾಬ್ಸ್ ಬಿಡುಗಡೆ ಮಾಡಿದ ಮೊದಲ ಐಫೋನ್; 16 ವರ್ಷಗಳ ನಂತರ ಭಾರೀ ಮೊತ್ತಕ್ಕೆ ಹರಾಜು

ಆ್ಯಪಲ್‌ನ ಐಫೋನ್‌ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಇದೆ. ಅದನ್ನು ಖರೀದಿಸಲು ಗ್ರಾಹಕರು ಮುಗಿಬೀಳ್ತಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್‌ ಟಾಪ್‌ 1 ಎನಿಸಿಕೊಂಡಿದೆ.

ಆಪಲ್ ತನ್ನ ಮೊದಲ ಐಫೋನ್ ಅನ್ನು 2007 ರಲ್ಲಿ ಬಿಡುಗಡೆ ಮಾಡಿತ್ತು. ಆ ಫೋನ್‌ ಈಗ ಹರಾಜಿನಲ್ಲಿ 54,904 ಡಾಲರ್‌ಗೆ ಅಂದರೆ ಸುಮಾರು 45 ಲಕ್ಷ ರೂಪಾಯಿಗೆ  ಮಾರಾಟವಾಗಿದೆ. 2007 ರಲ್ಲಿ ಪರಿಚಯಿಸಿದಾಗ ಈ ಐಫೋನ್‌ ಬೆಲೆ ಕೇವಲ 599 ಡಾಲರ್‌.

ಐಫೋನ್ ಬಿಡುಗಡೆಯಾದಾಗ ಅದನ್ನು ಖರೀದಿಸಿದ ಮಾಜಿ ಆಪಲ್ ಉದ್ಯೋಗಿ ಅದನ್ನು ಹರಾಜಿನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಇದರ ಜೊತೆಗೆ  Apple-1 ಕಂಪ್ಯೂಟರ್ ಅನ್ನು ಕೂಡ ಹರಾಜು ಹಾಕಲಾಗಿದೆ. ಆಪಲ್ ಸಿಇಓ ಟಿಮ್ ಕುಕ್ ಸಹಿ ಮಾಡಿದ ಐಫೋನ್ 11 ಗಾಗಿ ಸುಮಾರು 4,000 ಡಾಲರ್ ಪಾವತಿಸಲಾಗಿದೆ. ಸ್ಟೀವ್ ಜಾಬ್ಸ್ ಟಿಪ್ಪಣಿ ಮಾಡಿದ ತಾಂತ್ರಿಕ ಕೈಪಿಡಿ 12,500 ಡಾಲರ್‌ಗೆ ಬಿಕರಿಯಾಗಿದೆ. ಸ್ಟೀವ್ ಜಾಬ್ಸ್‌ ಅವರ ಬ್ಯುಸಿನೆಸ್‌ ಕಾರ್ಡ್‌ ಕೂಡ 6,188 ಡಾಲರ್‌ಗೆ ಮಾರಾಟವಾಗಿದೆ.

ಕಳೆದ ತಿಂಗಳು ಮೊದಲ ತಲೆಮಾರಿನ ಐಫೋನ್ ಹರಾಜಿನಲ್ಲಿ 63,356 ಡಾಲರ್‌ ಅಂದ್ರೆ ಅಂದಾಜು 52 ಲಕ್ಷ ರೂಪಾಯಿಯ ದಾಖಲೆ ಬೆಲೆ ಹರಾಜಾಗಿದೆ. ಇದು 2007ರ ಐಫೋನ್‌ಗೆ ಸಿಕ್ಕ ಅತಿ ಹೆಚ್ಚಿನ ಬೆಲೆ.  ಕಳೆದ ವರ್ಷ ಆಗಸ್ಟ್‌ನಲ್ಲಿ, ಮೊದಲ ತಲೆಮಾರಿನ 2007ರ ಐಫೋನ್ ಅನ್ನು ಮುಚ್ಚಿದ ಬಾಕ್ಸ್‌ನಲ್ಲಿ ಅಮೆರಿಕದಲ್ಲಿ 35,000 ಡಾಲರ್‌ ಅಂದ್ರೆ ಸುಮಾರು 28 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read