ಆತ್ಮಹತ್ಯಾ ಬಾಂಬರ್ ಸ್ಪೋಟಿಸಿಕೊಂಡ ವಿಡಿಯೋ ಹಂಚಿಕೊಂಡ ಪಾಕ್ ಪತ್ರಕರ್ತ; ಬೆಚ್ಚಿ ಬೀಳಿಸುವಂತಿದೆ ಈ ದೃಶ್ಯ

ಪಾಕಿಸ್ತಾನದ ಕರಾಚಿಯಲ್ಲಿ ಕಳೆದ ರಾತ್ರಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಶೇರಿಯಾ ಪೈಸಲ್ ನಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿ ದಾಳಿಗೊಳಗಾಗಿದ್ದು, ನಾಲ್ವರು ಉಗ್ರರು ಹಾಗೂ ಓರ್ವ ಪೊಲೀಸ್ ಸೇರಿದಂತೆ ಒಂಟು ಎಂಟು ಮಂದಿ ಮೃತಪಟ್ಟಿದ್ದಾರೆ.

ಬಿಳಿ ಬಣ್ಣದ ವಾಹನದಲ್ಲಿ ಬಂದ ಎಂಟು ಉಗ್ರರು ಇದ್ದ ಗುಂಪು ಕಚೇರಿ ಹಿಂಬದಿಂದ ಒಳ ಪ್ರವೇಶಿಸಿದ್ದು, ಗುಂಡಿನ ದಾಳಿ ಆರಂಭಿಸಿದ್ದಾರೆ. ಏಕಾಏಕಿ ನಡೆದ ಈ ದಾಳಿಯಿಂದ ಎಲ್ಲರೂ ಕಂಗಾಲಾಗಿದ್ದು, ಬಳಿಕ ಇತರೆ ಸ್ಥಳಗಳಿಂದ ಹೆಚ್ಚಿನ ಪೊಲೀಸ್ ಪಡೆಯನ್ನು ಕರೆಯಿಸಿಕೊಳ್ಳಲಾಗಿದೆ.

ಇದರ ಮಧ್ಯೆ ಪೊಲೀಸ್ ಮುಖ್ಯಸ್ಥರ ಕಚೇರಿಯ ನಾಲ್ಕನೇ ಅಂತಸ್ತಿನಲ್ಲಿ ಆತ್ಮಹತ್ಯಾ ಬಾಂಬರ್ ಸ್ಪೋಟಿಸಿಕೊಂಡಿರುವ ವಿಡಿಯೋವನ್ನು ಪಾಕ್ ಪತ್ರಕರ್ತರೊಬ್ಬರು ಹಂಚಿಕೊಂಡಿದ್ದು, ಬೆಚ್ಚಿ ಬೀಳಿಸುವಂತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/mugheesali81/status/1626631289737445389?ref_src=twsrc%5Etfw%7Ctwcamp%5Etweetembed%7Ctwterm%5E1626631289737445389%7Ctwgr%5Ed742896b9690f9930f7f657f7255e0aa8638ad73%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fpakjournalistsharesvideoofsuicidebomberblowinghimselfupon4thfloorofkarachipoliceoffice-newsid-n472675776

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read