ಕಣ್ಣು ಆಕರ್ಷಕವಾಗಿ ಕಾಣಬೇಕು ಎಂಬುದು ಬಹುತೇಕರ ಬಯಕೆಯೂ ಹೌದು. ಅದಕ್ಕಾಗಿ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ.
ಹರಳೆಣ್ಣೆಗೆ ಅಲೋವೆರಾ ಜೆಲ್ ಬೆರೆಸಿ ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಕಣ್ಣಿನ ರೆಪ್ಪೆ ಉದುರುವುದನ್ನು ತಡೆಯುತ್ತದೆ.
ದಿನ ಮಲಗುವ ಮುನ್ನ ಲೋಳೆರಸವನ್ನು ನಿಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿ ಮಲಗಿ. ಬೆಳಗ್ಗೆ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕಣ್ಣಿನ ರೆಪ್ಪೆಗಳು ಬಲು ಬೇಗ ಬೆಳೆಯುತ್ತದೆ.
ವಿಟಮಿನ್ ಇರುವ ಆಹಾರ ತಿನ್ನಿ. ಇದು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮುನ್ನ ಕಣ್ಣಿನ ಮೇಕಪ್ ಅನ್ನು ಉಜ್ಜಿ ತೆಗೆಯಿರಿ. ಸ್ವಚ್ಛವಾಗಿ ಕಣ್ಣು ತೊಳೆದೇ ಮಲಗಿ.
You Might Also Like
TAGGED:ಆಕರ್ಷಕ