‘ಆಕರ್ಷಕ’ ಕಣ್ಣಿಗೆ ಸೂಕ್ತವಾದ ಮೇಕಪ್ ಮಾಡಲು ಇಲ್ಲಿದೆ ಟಿಪ್ಸ್

ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ಅಡಗಿದೆ. ಸುಂದರ ಕಣ್ಣಿನ ಹೆಣ್ಣು ಎಲ್ಲರನ್ನು ಆಕರ್ಷಿಸ್ತಾಳೆ. ಹಾಗಾಗಿಯೇ ಪ್ರತಿಯೊಂದು ಹೆಣ್ಣು, ಕಣ್ಣು ಆಕರ್ಷಕವಾಗಿ ಕಾಣಲು ಮೇಕಪ್ ಮಾಡ್ತಾಳೆ.

ಸಣ್ಣ ಕಣ್ಣಿರುವವರು ಕಣ್ಣು ದೊಡ್ಡದಾಗಿ ಕಾಣಲಿ ಎನ್ನುವ ಕಾರಣಕ್ಕೆ ಕಣ್ಣಿಗೆ ಹೆಚ್ಚಿನ ಮೇಕಪ್ ಮಾಡ್ತಾರೆ. ಈ ಮೇಕಪ್ ಮಾಡುವ ವೇಳೆ ಕೆಲವೊಂದು ಅಂಶಗಳನ್ನು ತಿಳಿದಿದ್ರೆ ನಿಮ್ಮ ಕಣ್ಣನ್ನು ಮತ್ತಷ್ಟು ಆಕರ್ಷಕಗೊಳಿಸಿಕೊಳ್ಳಬಹುದು.

ನಿಮ್ಮ ಕಣ್ಣು ಚಿಕ್ಕದಾಗಿದ್ದರೆ ಎಂದೂ ಎಲ್ಲ ಕಡೆ ಐಲೈನರ್ ಹಚ್ಚಬೇಡಿ. ಕಣ್ಣಿನ ಅಂಚಿಗೆ ಮಾತ್ರ ಐಲೈನರ್ ಹಚ್ಚಿ. ಎಲ್ಲ ಕಡೆ ಹಚ್ಚಿದ್ರೆ ಕಣ್ಣು ಮತ್ತಷ್ಟು ಸಣ್ಣದಾಗಿ ಕಾಣುತ್ತದೆ.

ಕಣ್ಣಿನ ರೆಪ್ಪೆಯ ಮೇಲ್ಭಾಗದ ಜಾಗಕ್ಕೆ ತಿಳಿ ಬಣ್ಣದ ಐ ಶ್ಯಾಡೋವನ್ನು ಸಣ್ಣ ಬ್ರಷ್ ಸಹಾಯದಿಂದ ಹಚ್ಚಿಕೊಳ್ಳಿ. ಆದ್ರೆ ಮೂಗಿನ ಬಳಿ ಇರುವ ಜಾಗಕ್ಕೆ ಏನನ್ನೂ ಹಚ್ಚಬೇಡಿ. ಯಾಕೆಂದ್ರೆ ಅಲ್ಲಿ ಐಶ್ಯಾಡೋ ಹಚ್ಚಿದ್ರೆ ಕಣ್ಣು ಮತ್ತಷ್ಟು ಚಿಕ್ಕದಾಗಿ ಕಾಣುತ್ತದೆ.

ಸಣ್ಣ ಕಣ್ಣುಗಳು ದೊಡ್ಡದಾಗಿ ಕಾಣಬೇಕೆಂದ್ರೆ ಮಸ್ಕರಾ ಬೆಸ್ಟ್. ಇದ್ರಿಂದ ಕಣ್ಣು ಮತ್ತಷ್ಟು ಆಕರ್ಷಕವಾಗಿ  ಕಾಣಲು ನೆರವಾಗುತ್ತದೆ.

ಕಣ್ಣಿಗೆ ಶಿಮ್ಮರ್ ಮೇಕಪ್ ಮಾಡಿ. ಇದು ಹೊಳೆಯುವ ಡ್ರೈ ಪೌಡರ್. ಇದು ಕಣ್ಣಿನ ಮೇಲ್ಭಾಗಕ್ಕೆ ಹೊಳಪು ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read