ಅಸ್ತಮಾ ಉಲ್ಬಣಿಸಲು ಕಾರಣವಾಗುತ್ತಾ ಈ ಆಹಾರದ ಸೇವನೆ…..?

ಅಸ್ತಮಾ ಹೆಚ್ಚಾಗಿ ದೊಡ್ಡವರು ಹಾಗೂ ಚಿಕ್ಕಮಕ್ಕಳಲ್ಲಿಯೂ ಕಂಡುಬರುವ ಒಂದು ಉಸಿರಾಟದ ಸಮಸ್ಯೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ. ಹಾಗಾಗಿ ಅಸ್ತಮಾದಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು.

ಅಸ್ತಮಾ ಸಮಸ್ಯೆಯಿರುವವರು ಮಾಂಸವನ್ನು ಸೇವಿಸಿದರೆ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಸಂಶೋಧನೆಯೊಂದರ ಪ್ರಕಾರ ಬೇಯಿಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಉರಿಯೂತದ ಅಂಶ ಅಸ್ತಮಾಕ್ಕೆ ಕಾರಣವಾಗಬಹುದು. ಹಾಗಾಗಿ ಅಸ್ತಮಾ ಉಲ್ಬಣಿಸಲು ಆಹಾರ ಪದ್ಧತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಅಧ್ಯಯನದಲ್ಲಿ ಅತಿಯಾದ ಮಾಂಸ ಸೇವನೆಯು ಉಬ್ಬಸದಂತಹ ಉಸಿರಾಟದ ಲಕ್ಷಣಗಳಿಗೆ ಕಾರಣವಾಗಿದೆ ಎಂದು ತೋರಿಸಿದೆ. ಸಮುದ್ರಹಾರವಲ್ಲದ ಮಾಂಸವನ್ನು ಸೇವಿಸುವುದರಿಂದ ಈ ಸಮಸ್ಯೆ ಕಂಡು ಬರುತ್ತದೆ ಎನ್ನಲಾಗಿದೆ. ಇದು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಹಾಗಾಗಿ ಮಾಂಸವನ್ನು ಮಿತ ಪ್ರಮಾಣದಲ್ಲಿ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read