ಅಪ್ಸರೆಯನ್ನೂ ಮೀರಿಸುವಂತಿದ್ದಾಳೆ ಕರ್ನಾಟಕದ ಈ ಚೆಲುವೆ; ‘ಮಿಸ್‌ ಯೂನಿವರ್ಸ್‌’ ರೇಸ್‌ನಲ್ಲಿ ದಿವಿತಾ ರೈ

ಭಾರತದ ಅದರಲ್ಲೂ ಕರ್ನಾಟಕ ಮೂಲದ ದಿವಿತಾ ರೈ ಮಿಸ್ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಕಾಸ್ಟ್ಯೂಮ್ ರೌಂಡ್‌ನಲ್ಲಿ ಚಿನ್ನದ ಹಕ್ಕಿಯ ಲುಕ್‌ನಲ್ಲಿ ದಿವಿತಾ ಕಂಗೊಳಿಸಿದ್ದಾರೆ. ಅಮೆರಿಕದ ಲೂಸಿಯಾನದಲ್ಲಿ ವಿಶ್ವ ಸುಂದರಿ 2023 ಸ್ಪರ್ಧೆ ನಡೆಯಲಿದೆ. ಜನವರಿ 14ರಿಂದ ಇದು ಪ್ರಸಾರವಾಗಲಿದೆ. ಭಾರತವನ್ನು ಪ್ರತಿನಿಧಿಸ್ತಾ ಇರೋ ದಿವಿತಾ ರೈ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ದಿವಿತಾಗೆ ಈಗ 25 ವರ್ಷ, ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಮಿಸ್ ದಿವಾ ಯೂನಿವರ್ಸ್ 2022 ಆಗಿ ಆಯ್ಕೆಯಾಗಿದ್ದರು.

ಇದೀಗ ಮಿಸ್‌ ಯೂನಿವರ್ಸ್‌ ಪಟ್ಟಕ್ಕಾಗಿ ರೇಸ್‌ನಲ್ಲಿದ್ದಾರೆ. ದಿವಿತಾರ ಗೋಲ್ಡನ್‌ ಡ್ರೆಸ್‌ ಲುಕ್‌ ಸಾಕಷ್ಟು ಚರ್ಚೆಯಾಗ್ತಿದೆ. ಇದರಲ್ಲಿ ಆಕೆ ಚಿನ್ನದ ಹಕ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ದಿವಿತಾರ ವಿಶಿಷ್ಟ ವೇಷಭೂಷಣಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ವೇಷಭೂಷಣ ರೌಂಡ್‌ಗಾಗಿ ದಿವಿತಾ ಈ ವಿಶಿಷ್ಟ ಲುಕ್‌ ಆರಿಸಿಕೊಂಡಿದ್ದರು. ಈ ಉಡುಪಿನಲ್ಲಿ ದಿವಿತಾ ಅಪ್ಸರೆಯಂತೆಯೇ ಕಂಗೊಳಿಸಿದ್ದಾರೆ. ವಿಶೇಷ ಅಂದ್ರೆ ದಿವಿತಾ ರೈ ಕರ್ನಾಟಕ ಮೂಲದವರು. ಸೌಂದರ್ಯದ ಜೊತೆಗೆ ಆತ್ಮವಿಶ್ವಾಸದೊಂದಿಗೆ ಮಿಸ್‌ ಯೂನಿವರ್ಸ್‌ನಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ದಿವಿತಾರ ಸುಂದರ ಸ್ಟೈಲ್ ನೋಡಿದವರೆಲ್ಲ ಮತ್ತೊಮ್ಮೆ ಭಾರತಕ್ಕೇ ಮಿಸ್‌ ಯೂನಿವರ್ಸ್‌ ಕಿರೀಟ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಭಾರತದ ಹರ್ನಾಜ್ ಸಂಧು 2021 ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದರು. ಈ ಸ್ಪರ್ಧೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಏಕೆಂದರೆ 80 ದೇಶಗಳ ಸುಂದರಿಯರು ಇದರಲ್ಲಿ ಭಾಗವಹಿಸಲಿದ್ದಾರೆ. ದಿವಿತಾ ಬಿಕಿನಿ ರೌಂಡ್‌ನಲ್ಲಿ ಕೂಡ ತೀರ್ಪುಗಾರರ ಗಮನಸೆಳೆದಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read