ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಹೊಸದುರ್ಗ ನ್ಯಾಯಾಲಯ….!

ಶನಿವಾರದಂದು ಹೊಸದುರ್ಗ ನ್ಯಾಯಾಲಯ ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಕಳೆದ 13 ವರ್ಷಗಳಿಂದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದ ದಂಪತಿ, ರಾಜಿ ಸಂಧಾನವಾದ ಬಳಿಕ ಲೋಕ್ ಅದಾಲತ್ ನಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ಒಂದಾಗಿದ್ದಾರೆ.

ಪ್ರಕರಣದ ವಿವರ: 2008ರಲ್ಲಿ ಶಿವಮೊಗ್ಗದ ನಾಗರಾಜ್ ಅವರು ಹೊಸದುರ್ಗದ ಲಕ್ಷ್ಮಿಯೊಂದಿಗೆ ವಿವಾಹವಾಗಿದ್ದು, ಒಂದೇ ವರ್ಷದಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಉಭಯ ಕುಟುಂಬಸ್ಥರು ರಾಜಿ ಮಾಡಿಸಿದರೂ ಫಲಪ್ರದವಾಗಿರಲಿಲ್ಲ.

ಹೀಗಾಗಿ ನಾಗರಾಜ್ ವಿಚ್ಛೇದನ ಕೋರಿ 2010ರಲ್ಲಿ ಹರಿಹರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ಹೊಸದುರ್ಗ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆದರೆ ವಿಚ್ಛೇದನಕ್ಕೆ ಲಕ್ಷ್ಮಿ ಒಪ್ಪಿಗೆ ಸೂಚಿಸದ ಕಾರಣ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದು, ಪುನಃ ಪ್ರಕರಣವನ್ನು ಹೊಸದುರ್ಗ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ನಾಗರಾಜ್ ಶಿವಮೊಗ್ಗ ನ್ಯಾಯಾಲಯದಲ್ಲೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ಇದನ್ನು ಸಹ ಹೊಸದುರ್ಗ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಶನಿವಾರದಂದು ಜೆ.ಎಂ.ಎಫ್.ಸಿ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಶಿಕಲಾ ಅವರು ಲಕ್ಷ್ಮಿ ಪರ ವಕೀಲರಾದ ಡಿ.ವಿ. ಅಂಜನಾ ಮೂರ್ತಿ ಹಾಗೂ ದಂಪತಿ ಜೊತೆ ಮಾತುಕತೆ ನಡೆಸಿದ್ದು, ಈ ವೇಳೆ ಮನಸ್ಸು ಬದಲಿಸಿದ ನಾಗರಾಜ್ – ಲಕ್ಷ್ಮಿ ವೈಮನಸ್ಯ ಮರೆತು ಒಂದಾಗಿ ಬಾಳು ನಡೆಸಲು ನಿರ್ಧರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read