ಅಪಘಾತಕ್ಕೀಡಾದ ಕಾರಿನಲ್ಲಿ ಸಿ.ಟಿ. ರವಿ ಭಾವಚಿತ್ರವಿರುವ ಕ್ಯಾಲೆಂಡರ್ ಜೊತೆಗೆ ಅಕ್ರಮ ಮದ್ಯ ಪತ್ತೆ

ಭಾನುವಾರ ತಡರಾತ್ರಿ ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿ ಬ್ರೇಕ್ ಡೌನ್ ಆದ ಕಾರೊಂದು ಅಪಘಾತಕ್ಕೀಡಾಗಿದ್ದು, ಸಾರ್ವಜನಿಕರು ಸಹಾಯಕ್ಕೆ ಹೋದ ವೇಳೆ ಅದರಲ್ಲಿ ಅಕ್ರಮ ಮದ್ಯ ಹಾಗೂ ಮಾರಕಾಸ್ತ್ರ ಪತ್ತೆಯಾಗಿದೆ.

ಮಾರುತಿ – 800 ಕಾರು ಅಪಘಾತಕ್ಕೀಡಾದಾಗ ಸಾರ್ವಜನಿಕರು ಮೇಲೆತ್ತಿ ತಳ್ಳಲು ಮುಂದಾಗಿದ್ದು, ಆಗ ಅದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾವಚಿತ್ರವಿರುವ ಕ್ಯಾಲೆಂಡರ್, ಅಕ್ರಮ ಮದ್ಯ ಹಾಗೂ ಮಾರಕಾಸ್ತ್ರ ಇದ್ದದ್ದು ಕಂಡು ಬಂತು.

ಈ ಕುರಿತಂತೆ ಚಾಲಕ ಮಂಜುನಾಥನ ಬಳಿ ಪ್ರಶ್ನಿಸಿದಾಗ ಆತ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮಂಜುನಾಥ, ಸಿ.ಟಿ. ರವಿಯವರ ಆಪ್ತ ಎಂದು ಹೇಳಲಾಗುತ್ತಿದ್ದು, ಪೊಲೀಸರ ವಿಚಾರಣೆ ಬಳಿಕ ಸತ್ಯಾಂಶ ತಿಳಿದು ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read