ನಕಾರಾತ್ಮಕ ಶಕ್ತಿ ದೂರ ಮಾಡಿ ಅನೇಕ ಸಮಸ್ಯೆಗೆ ಪರಿಹಾರ ಕೊಡುತ್ತೆ ಈ ʼವಸ್ತುʼ

ನಕಾರಾತ್ಮಕ ಶಕ್ತಿ ದೂರ ಮಾಡಲು ವಾಸ್ತು ಶಾಸ್ತ್ರದಲ್ಲಿ ಅನೇಕ ವಿಧಾನಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಪಾಲಿಸಿದ್ರೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುವ ಜೊತೆಗೆ ಸಮಸ್ಯೆಗಳು ದೂರ ಓಡುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಅಲಮ್ ಅಥವಾ ಫಿಟ್ಕರಿಯಿಂದಲೂ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಪ್ರತಿ ದಿನ ಕೆಟ್ಟ ಸ್ವಪ್ನ ಬೀಳುತ್ತಿದ್ದರೆ, ನಕಾರಾತ್ಮಕ ಶಕ್ತಿ ನಿಮ್ಮ ಸುತ್ತಮುತ್ತಲಿದೆ ಎಂಬ ಭಾವನೆ ನಿಮಗೆ ಬಂದಲ್ಲಿ ಮಂಗಳವಾರ ಅಥವಾ ಭಾನುವಾರ ಫಿಟ್ಕರಿಯ ಪುಡಿಯನ್ನು ತಲೆ ಬಳಿ ಇಟ್ಟು ಮಲಗಿ.

ನೀವು ವ್ಯಾಪಾರಸ್ಥರಾಗಿದ್ದು ಯಾವುದೇ ಲಾಭ ಬರ್ತಾ ಇಲ್ಲ ಎಂದಾದಲ್ಲಿ ಕಚೇರಿಯ ಅಥವಾ ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಮೇಲೆ ಕಪ್ಪು ಬಟ್ಟೆಯಲ್ಲಿ ಫಿಟ್ಕರಿ ಕಟ್ಟಿ ತೂಗು ಹಾಕಿ.

ಒಂದು ಬಾಕ್ಸ್ ನಲ್ಲಿ ಫಿಟ್ಕರಿ ಹಾಕಿ ಸ್ನಾನಗೃಹದಲ್ಲಿಡಿ. ಒಂದು ತಿಂಗಳ ನಂತ್ರ ಬಾಕ್ಸ್ ನಲ್ಲಿರುವ ಫಿಟ್ಕರಿಯನ್ನು ಬದಲಿಸಿ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಂಪೂರ್ಣವಾಗಿ ಓಡಿ ಹೋಗಿರುತ್ತದೆ.

ಮನೆಯಲ್ಲಿ ಸದಾ ಗಲಾಟೆ, ಜಗಳ ನಡೆಯುತ್ತಿದ್ದರೆ ಇದಕ್ಕೆ ಫಿಟ್ಕರಿ ಪರಿಹಾರ ನೀಡಲಿದೆ. ರಾತ್ರಿ ಮಲಗುವ ವೇಳೆ ಹಾಸಿಗೆ ಬಳಿ ಗ್ಲಾಸ್ ಗೆ ನೀರು ಹಾಕಿ ಅದಕ್ಕೆ ಫಿಟ್ಕರಿ ಹಾಕಿ ಇಡಿ. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಅಶ್ವಥ ಮರದ ಕೆಳಗೆ ಹಾಕಿ. ಇದ್ರಿಂದ ಸಂಬಂಧ ಸುಧಾರಿಸುತ್ತ ಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read