ಅನಾಥ ಶವದ ಬಳಿ ಬರೋಬ್ಬರಿ 6.65 ಲಕ್ಷ ರೂಪಾಯಿ ಪತ್ತೆ….!

ಕೂಲಿ ಕೆಲಸ ಮಾಡಿಕೊಂಡು ರಾತ್ರಿ ಬಸ್ ತಂಗುದಾಣ, ಅಂಗಡಿಗಳ ಮುಂಭಾಗದಲ್ಲಿ ಮಲಗುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರದಂದು ಮೃತಪಟ್ಟಿದ್ದು, ಆತನ ವಾರಸುದಾರರನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರು ಅಚ್ಚರಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಬೆಳ್ತಂಗಡಿಯಲ್ಲಿ 55 ವರ್ಷದ ತಮ್ಮಯ್ಯ ಮೃತಪಟ್ಟಿದ್ದು, ಈತನ ದೇಹದ ಬಳಿ ಬ್ಯಾಗ್ ಒಂದು ಇದ್ದ ಕಾರಣ ವಾರಸುದಾರರ ಸುಳಿವು ಸಿಗಬಹುದೆಂಬ ಕಾರಣಕ್ಕೆ ಪೊಲೀಸರ ಸಮ್ಮುಖದಲ್ಲಿ ಇದನ್ನು ತೆರೆದು ನೋಡಿದಾಗ ಬರೋಬ್ಬರಿ 6.65 ಲಕ್ಷ ರೂಪಾಯಿ ಪತ್ತೆಯಾಗಿದೆ.

ಕುಶಾಲನಗರದ ಮೂಲದ ತಮ್ಮಯ್ಯ ಉಜಿರೆಯಲ್ಲಿ ಬಹಳ ಕಾಲದಿಂದ ವಾಸವಾಗಿದ್ದು, ಕೂಲಿ ಕೆಲಸದಿಂದಲೇ ಇಷ್ಟೊಂದು ಹಣ ಉಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read