ಸಮರಕಲೆ ಎಂದಾಕ್ಷಣ ಹೆಚ್ಚಾಗಿ ನೆನಪಿಗೆ ಬರುವುದು ಪುರುಷರು. ಸಮರ ಕಲೆಗಳು ಮತ್ತು ಕರಾಟೆಗಳಲ್ಲಿ ಪಳಗಿರುವ ಎಷ್ಟೋ ಮಹಿಳೆಯರೂ ಇದ್ದಾರೆ. ಇದೀಗ ಅಂತರ್ಜಾಲದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಯುವತಿಯೊಬ್ಬಳು ನುಂಚಕು ಬಳಸಿ ಸಮರ ಕಲೆಗಳ ಕೌಶಲವನ್ನು ತೋರಿಸುತ್ತಿರುವುದನ್ನು ನೋಡಬಹುದಾಗಿದೆ.
ಟ್ವಿಟರ್‌ನಲ್ಲಿ ನೆಕ್ಸ್ಟ್ ಲೆವೆಲ್ಸ್ ಸ್ಕಿಲ್ಸ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಹಲವಾರು ಮೇಣದ ಬತ್ತಿಗಳನ್ನು ನಂದಿಸಲು ನುಂಚಕು ಬಳಸುತ್ತಿರುವುದನ್ನು ನೋಡಬಹುದು. ಈಕೆ ಕಣ್ಣನ್ನು ಮುಚ್ಚಿಕೊಂಡು ಕುಡ ಸಮರ ಕಲೆಗಳ ಕೌಶಲ ಪ್ರದರ್ಶಿಸಿದ್ದಾಳೆ.
ಹಲವಾರು ಕಾಮೆಂಟ್‌ಗಳೊಂದಿಗೆ ಟ್ವಿಟ್ಟರ್‌ನಲ್ಲಿ ವೀಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಸಾಧನೆ ಮಾಡುವ ಛಲವಿದ್ದರೆ ಎಂಥ ಕಠಿಣವಾದ ಕೆಲಸಗಳನ್ನೂ ಮಾಡಬಹುದು ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ಹೇಳಿದ್ದಾರೆ.
ಈ ವಿಡಿಯೋದಲ್ಲಿ ಇರುವ ಯುವತಿ ಅತ್ಯಂತ ಸಲೀಸಾಗಿ ಕೌಶಲ ಪ್ರದರ್ಶನ ಮಾಡುವುದನ್ನು ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಕಣ್ಣನ್ನು ತೆರೆದು ಮಾತ್ರವಲ್ಲದೇ ಕಣ್ಣನ್ನು ಮುಚ್ಚಿ ಕೂಡ ಪ್ರದರ್ಶನ ತೋರುವುದು ಸುಲಭದ ಮಾತಲ್ಲ ಎಂದು ಯುವತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
https://twitter.com/NextSkillslevel/status/1619296491037929474?ref_src=twsrc%5Etfw%7Ctwcamp%5Etweetembed%7Ctwterm%5E1619296491037929474%7Ctwgr%5Ee99612ce720df5c26b754a5887158b63d7e32b12%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-womans-impressive-martial-arts-skills-leaves-internet-amazed-3737597