ಅತಿ ಹೆಚ್ಚು ಮಾಯಿಸ್ಚರೈಸರ್ ಬಳಕೆ ತ್ವಚೆಗೆ ಹಾನಿಕರ

ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಪದೇ ಪದೇ ಮಾಯಿಸ್ಚರೈಸರ್ ಹಚ್ಚಿಕೊಳ್ಳುತ್ತೀರಾ, ಇದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಂಡಾವು. ಅವುಗಳು ಯಾವುವೆಂದು ತಿಳಿಯೋಣ.

ಹೆಚ್ಚು ಹೆಚ್ಚು ಮಾಯಿಸ್ಚರೈಸರ್ ಬಳಸಿದಂತೆ ತ್ವಚೆಯ ಮೇಲೆ ಕಪ್ಪು ಕಲೆ ಕಾಣಿಸಿಕೊಂಡೀತು. ತ್ವಚೆ ಜಿಡ್ಡುಜಿಡ್ಡಾಗಿ ಬದಲಾದೀತು. ಇದರೊಂದಿಗೆ ನಿಮ್ಮ ಚರ್ಮ ಸೂಕ್ಷ್ಮವಾಗುತ್ತದೆ. ಯಾವುದೇ ಮೇಕಪ್ ಮಾಡಿಕೊಂಡರೂ ಅದು ಮುಖಕ್ಕೆ ಅಂಟಿಕೊಂಡಂತಾಗಬಹುದು.

ಹೆಚ್ಚಿನ ಮಾಯಿಸ್ಚರೈಸರ್ ಬಳಕೆಯಿಂದ ಮುಖದ ಮೇಲೆ ಮೊಡವೆಗಳು ಹೆಚ್ಚಬಹುದು. ನಿಮ್ಮ ಮುಖದ ಸಹಜ ಹೊಳಪು ದೂರವಾಗಿ ತ್ವಚೆಯ ಕೋಮಲತೆಯನ್ನು ಹಾಳು ಮಾಡೀತು. ಹಾಗಾದರೆ ಮಾಯಿಸ್ಚರೈಸರ್ ಅನ್ನು ಎಷ್ಟು ಮತ್ತು ಹೇಗೆ ಬಳಸಬೇಕೆಂದು ನೋಡೋಣ.

ಕಡಲೆ ಗಾತ್ರದ ಕ್ರೀಮ್ ಅನ್ನು ತೆಗೆದು ಎರಡೂ ಅಂಗೈಯಲ್ಲಿ ಉಜ್ಜಿ. ಕೆನ್ನೆ ಹಾಗೂ ಹಣೆಗೆ ವೃತ್ತಾಕಾರದಲ್ಲಿ ತಿಕ್ಕಿ. ಕಡ್ಡಾಯವಾಗಿ ದಿನಕ್ಕೆರಡು ಬಾರಿ ಅಂದರೆ ಬೆಳಿಗ್ಗೆ ಸ್ನಾನವಾದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಮಾತ್ರ ಇದನ್ನು ಬಳಸಿ. ಅದಕ್ಕಿಂತ ಹೆಚ್ಚು ಬಾರಿ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read