ಅತಿ ಹೆಚ್ಚು ನೀರು ಕುಡಿಯುವ ಅಭ್ಯಾಸ ನಿಮಗಿದ್ರೆ ಈ ಸುದ್ದಿ ಓದಿ

ದೈನದಿಂನ ಜೀವನದ ಆಹಾರ ಕ್ರಮದಲ್ಲಿ ನೀರು ಸೇವನೆಗೆ ಹೆಚ್ಚಿನ ಮಹತ್ವ ನೀಡಿದ್ರೆ ಅನೇಕ ರೋಗಗಳಿಂದ ಪಾರಾಗಬಹುದು ಅಂತಾ ಅನೇಕರು ಹೇಳ್ತಾರೆ. ಆದರೆ ಈ ನೀರು ಸೇವನೆ ಕೂಡ ಮನುಷ್ಯನ ದೇಹ ಸ್ಥಿತಿ, ಸ್ಥಳೀಯ ಹವಾಮಾನ ಸೇರಿದಂತೆ ಅನೇಕ ಅಂಶಗಳನ್ನ ಅವಲಂಬಿಸಿ ಇರುತ್ತದೆ.

ಹಾಗಾದರೆ ಹೆಚ್ಚು ನೀರು ಕುಡಿಯೋದ್ರಿಂದ ಏನಾದ್ರೂ ಸಮಸ್ಯೆ ಉಂಟಾಗಬಹುದೇ..? ಎಂಬ ಪ್ರಶ್ನೆಯನ್ನ ಕೇಳಿದ್ರೆ ಇದಕ್ಕೆ ಉತ್ತರ ಹೌದು. ಅತಿಯಾದ ನೀರು ಸೇವನೆಗೆ ದೇಹದಲ್ಲಿ ದ್ರವ ಅಸಮತೋಲನಕ್ಕೆ ಕಾರಣವಾಗಬಹುದು. ಜೊತೆಗೆ ದೇಹದಲ್ಲಿನ ಸೋಡಿಯಂ ಮಟ್ಟವನ್ನೂ ಕಡಿಮೆ ಮಾಡಲು ಕಾರಣವಾಗಬಹುದು. ಇಷ್ಟು ಮಾತ್ರವಲ್ಲದೇ ವಾಕರಿಕೆ, ಆಯಾಸ, ಹಾಗೂ ವಾಂತಿ ಕೂಡ ಬರಬಹುದು. ದೇಹದಲ್ಲಿನ ಇಂತಹ ಸ್ಥಿತಿಗೆ ಹೈಪೋನಾಟ್ರೀಮಿಯಾ ಎಂದು ಕರೆಯಲಾಗುತ್ತೆ.

ಅನಗತ್ಯ ಪ್ರಮಾಣದಲ್ಲಿ ನೀರು ಕುಡಿಯೋದ್ರಿಂದ ದೇಹದಲ್ಲಿ ಇಷ್ಟೆಲ್ಲ ಅಸಮತೋಲನ ಉಂಟಾಗುವ ಸಾಧ್ಯತೆ ಜಾಸ್ತಿ ಇರುತ್ತೆ.

ತಜ್ಞರು ಹೇಳುವ ಪ್ರಕಾರ ಮಹಿಳೆಯರಿಗೆ 2.7 ಲೀಟರ್​ ಹಾಗೂ ಪುರುಷರಿಗೆ 3.7 ಲೀಟರ್​ ನೀರು ದಿನನಿತ್ಯ ಸೇವನೆಗೆ ಗರಿಷ್ಟ ಮಟ್ಟವಾಗಿದೆ. ಆದರೆ ಹವಾಮಾನ, ಆಹಾರ ಪದ್ಧತಿ, ತಾಪಮಾನ, ಪರಿಸರ, ಆರೋಗ್ಯ ಸ್ಥಿತಿಯನ್ನ ಪರಿಗಣಿಸಿ ಇದನ್ನ ಹೆಚ್ಚು ಇಲ್ಲವೇ ಕಡಿಮೆ ಮಾಡಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read