ಅಡುಗೆ ಮನೆಯಲ್ಲಿರುವ ಈ 4 ವಸ್ತುಗಳನ್ನು ಇಂದೇ ಹೊರಕ್ಕೆಸೆಯಿರಿ, ಇಲ್ಲದಿದ್ದರೆ ಈ ‘ಮಾರಣಾಂತಿಕ’ ಕಾಯಿಲೆಗೆ ಬಲಿಯಾಗಬಹುದು….!

ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರ ಜೊತೆಗೆ ಶುದ್ಧ ನೀರು, ಶುದ್ಧ ಆಹಾರ ಮತ್ತು ಸರಿಯಾದ ವ್ಯಾಯಾಮವಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಆದರೆ ಇವೆಲ್ಲದರ ಹೊರತಾಗಿಯೂ ಮನೆಯಲ್ಲಿರುವ ಕೆಲವೊಂದು  ವಸ್ತುಗಳು ನಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಮನೆಯಲ್ಲಿರುವ ಕೆಲವು ಪ್ಲಾಸ್ಟಿಕ್ ವಸ್ತುಗಳು ಆರೋಗ್ಯಕ್ಕೆ ಕುತ್ತು ತರುತ್ತವೆ. ಅವುಗಳನ್ನು ಆದಷ್ಟು ಬೇಗ ಹೊರಕ್ಕೆ ಹಾಕುವುದು ಉತ್ತಮ.

ನೀವು ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸುತ್ತಿದ್ದರೆ ಅವುಗಳನ್ನು ಮೊದಲು ಮನೆಯಿಂದ ಹೊರಗೆ ಎಸೆಯಿರಿ. ಫ್ರಿಡ್ಜ್‌ನಲ್ಲಿ ತಣ್ಣೀರು ಕುಡಿಯುವ ಪ್ಲಾಸ್ಟಿಕ್ ಬಾಟಲಿಗಳು ಇರುತ್ತವೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಪ್ಲಾಸ್ಟಿಕ್ ಬಾಟಲಿಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಬಿಸ್ಫೆನಾಲ್ ಎ ಅನ್ನು ಬಳಸಲಾಗುತ್ತದೆ. ಇದರಿಂದಾಗಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳು ಬರಬಹುದು.

ಪ್ಲಾಸ್ಟಿಕ್ ಬಾಟಲಿಗಳ ಜೊತೆಗೆ ಅಡುಗೆಮನೆಯಲ್ಲಿ ಪ್ಲಾಸ್ಟಿಕ್ ಡಬ್ಬಗಳನ್ನು ಇಟ್ಟುಕೊಂಡಿದ್ದರೆ ಅವುಗಳನ್ನು ಸಹ ಎಸೆಯಿರಿ. ಅಂತಹ ಕಂಟೈನರ್‌ಗಳಲ್ಲಿ ಇರಿಸಲಾದ ಪದಾರ್ಥಗಳು  ಪ್ಲಾಸ್ಟಿಕ್‌ನ ಅಪಾಯಕಾರಿ ಸಂಯುಕ್ತವಾದ ಬಿಸ್ಫೆನಾಲ್ ಎ ಪರಿಣಾಮವನ್ನು ಹೊಂದಿರುತ್ತವೆ, ಇದು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಅಥವಾ ಗಾಜಿನ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬಹುದು.

ಇನ್ನು ಕೆಲವರು ಪ್ಲಾಸ್ಟಿಕ್‌ ಚಾಪಿಂಗ್‌ ಬೋರ್ಡ್‌ ಅನ್ನು ತರಕಾರಿ ಕತ್ತರಿಸಲು ಬಳಸುತ್ತಾರೆ. ಪ್ಲಾಸ್ಟಿಕ್‌ ಚಾಪಿಂಗ್‌ ಬೋರ್ಡ್‌ನಲ್ಲಿರೋ ಅಪಾಯಕಾರಿ ಸಂಯುಕ್ತವು ದೇಹಕ್ಕೆ ಸೇರಿಕೊಳ್ಳುತ್ತದೆ. ಪ್ಲಾಸ್ಟಿಕ್ ಆಹಾರದೊಂದಿಗೆ ಹೊಟ್ಟೆಗೆ ಹೋಗುವ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಆದಷ್ಟು ಬೇಗ ಅದನ್ನೂ ಬದಲಾಯಿಸಿ.

ಕಚೇರಿಗೆ ಹೋಗುವ ಗಂಡ, ಶಾಲೆ, ಕಾಲೇಜಿಗೆ ತೆರಳುವ ಮಕ್ಕಳಿಗೆ ಪ್ಲಾಸ್ಟಿಕ್ ಟಿಫಿನ್ ಬಾಕ್ಸ್‌ನಲ್ಲಿ ಊಟ ತುಂಬಿಸಿ ಕೊಡುವುದರಿಂದಲೂ ಅವರ ಆರೋಗ್ಯವನ್ನು ಅಸ್ವಸ್ಥಗೊಳಿಸುತ್ತೀರಿ. ಇವುಗಳಲ್ಲಿ ಬಿಸಿ ಆಹಾರವನ್ನು ಹಾಕಿದಾಗ ಅದರೊಂದಿಗೆ ಪ್ಲಾಸ್ಟಿಕ್ ಬಿಸಿಯಾಗಿ ಆಹಾರದಲ್ಲಿ ಬೆರೆತು ದೇಹವು ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳಿಗೆ ತುತ್ತಾಗಬಹುದು. ಅದಕ್ಕಾಗಿಯೇ ಗಾಜಿನ ಜಾರ್‌ಗಳು ಮತ್ತು ಸ್ಟೀಲ್ ಟಿಫಿನ್ ಬಾಕ್ಸ್‌ಗಳನ್ನು ಬಳಸಿದರೆ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read