ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಎರಡನೇ ವಿವಾಹ; ಟ್ರೋಲ್‌ಗೆ ತುತ್ತಾಗುತ್ತಲೇ ಇದ್ದಾಳೆ ಪಾಕ್‌ ನಟಿ….!

ಪ್ರೀತಿಸಲು ವಯಸ್ಸಿನ ಮಿತಿಯಿಲ್ಲ ಅನ್ನೋ ಮಾತಿದೆ. ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದಾಳೆ ಪಾಕಿಸ್ತಾನದ ಹಿರಿಯ ನಟಿ. ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾಳೆ. 72 ವರ್ಷದ ನಟಿಯೊಬ್ಬಳು ತನಗಿಂತ ಎರಡು ವರ್ಷ ಕಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಅನೇಕ ವರ್ಷಗಳಿಂದ ಗ್ಲಾಮರ್ ಜಗತ್ತಿನಲ್ಲಿ ಸಕ್ರಿಯವಾಗಿರುವ ಸಮೀನಾ ಅಹ್ಮದ್ ಇಳಿವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಳು.

ಸಮೀನಾ ಅಹ್ಮದ್ ಸಾಕಷ್ಟು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾಳೆ. ‘ಸುನೋ ಚಂದಾ’, ‘ಮೇರೆ ಹಮ್‌ಸಫರ್‌’ ಮತ್ತು ‘ಮಾರ್ವೆಲ್’ ಸರಣಿಯ ‘ಮಿಸ್ ಮಾರ್ವೆಲ್’ ನಂತಹ ಪ್ರಸಿದ್ಧ ಶೋಗಳಲ್ಲಿ ಸಮೀನಾ ನಟಿಸಿದ್ದಾಳೆ. ಸಮೀನಾ ತನಗಿಂತ ಎರಡು ವರ್ಷ ಚಿಕ್ಕವನನ್ನು ವಿವಾಹವಾಗಿದ್ದು, ಸಾಕಷ್ಟು ಟ್ರೋಲ್‌ಗೆ ತುತ್ತಾಗುತ್ತಲೇ ಇದ್ದಾಳೆ. ಸಮೀನಾ ಅಹಮದ್ ಮದುವೆಯಾಗಿ ಮೂರು ವರ್ಷಗಳೇ ಕಳೆದಿವೆ.

ಆಕೆಯ ಮದುವೆ ವಿಚಾರಕ್ಕೆ ಸಾಕಷ್ಟು ವಿವಾದವೂ ಆಗಿತ್ತು. ಆದರೆ ನಟಿ ಮತ್ತಾಕೆಯ ಪತಿ ಇಬ್ಬರೂ ದೃಢವಾಗಿ ನಿಂತು ಅದನ್ನೆಲ್ಲ ಎದುರಿಸಿದ್ದಾರೆ. ವರದಿಗಳ ಪ್ರಕಾರ ಸಮೀನಾ ಕುಟುಂಬ ಸದಸ್ಯರು ಸಹ ಮದುವೆಯನ್ನು ವಿರೋಧಿಸಿದ್ದರು. ಆದರೆ ಅವರೆಲ್ಲರ ಮನವೊಲಿಸಿ ಎರಡನೇ ಮದುವೆಯಾಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read