ಅಗ್ಗದ ಬೆಲೆಯಲ್ಲಿ ಹೊಸ ಕಾರನ್ನು ಹೊರತಂದಿದೆ ಹ್ಯುಂಡೈ ಕಂಪನಿ; ಸಿಕ್ಕಾಪಟ್ಟೆ ಇಷ್ಟವಾಗುವಂತಿವೆ ಅದರ ಫೀಚರ್ಸ್‌….!

ಹ್ಯುಂಡೈ ಮೋಟಾರ್ ಇಂಡಿಯಾದ ಅಗ್ಗದ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರಾಂಡ್ i10 ನಿಯೋಸ್‌ನ ಹೊಸ ರೂಪಾಂತರವನ್ನು ಹ್ಯುಂಡೈ ಕಂಪನಿ ಬಿಡುಗಡೆ ಮಾಡಿದೆ. ಇದನ್ನು ಸ್ಪೋರ್ಟ್ಸ್‌ ಎಕ್ಸಿಕ್ಯೂಟಿವ್ ಎಂದು ಹೆಸರಿಸಲಾಗಿದೆ. ಈ ಹೊಸ ರೂಪಾಂತರವನ್ನು ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಮ್ಯಾನುವಲ್ ಆವೃತ್ತಿಯ ಬೆಲೆ 7.16 ಲಕ್ಷ ರೂಪಾಯಿ ಇದ್ರೆ, ಎಎಂಟಿ ಮಾದರಿಯ ಬೆಲೆ 7.70 ಲಕ್ಷ ರೂಪಾಯಿ.

ಹೊಸ ಹ್ಯುಂಡೈ ಗ್ರಾಂಡ್ i10 ನಿಯೋಸ್ ಸ್ಪೋರ್ಟ್ಸ್‌ ಎಕ್ಸಿಕ್ಯೂಟಿವ್ ರೂಪಾಂತರವು ಮ್ಯಾಗ್ನಾ ಮತ್ತು ಸ್ಪೋರ್ಟ್ಸ್‌ ಟ್ರಿಮ್‌ಗಳ ನಡುವೆ ಸ್ಥಾನ ಪಡೆದಿದೆ. ಇದು 1.2L ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಆವೃತ್ತಿಯಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿಲ್ಲ. ಹೊಸ ಹ್ಯುಂಡೈ ಗ್ರಾಂಡ್ i10 ನಿಯೋಸ್ ಸ್ಪೋರ್ಟ್ಸ್‌ ಎಕ್ಸಿಕ್ಯೂಟಿವ್ ರೂಪಾಂತರದ ವೈಶಿಷ್ಟ್ಯಗಳು ಸ್ಪೋರ್ಟ್ಸ್‌ ಟ್ರಿಮ್‌ನಂತೆಯೇ ಇವೆ.

ಈ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 8.0-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 3.5-ಇಂಚಿನ MID ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್, 2-ಡಿಐಎನ್ ಇಂಟಿಗ್ರೇಟೆಡ್ ಆಡಿಯೊ ಸಿಸ್ಟಮ್, 4 ಸ್ಪೀಕರ್‌ಗಳು, ರೇರ್‌ ಪಾರ್ಕಿಂಗ್ ಕ್ಯಾಮೆರಾ, ರೇರ್‌ ಡಿಫಾಗರ್, ರೇರ್‌ ಪಾರ್ಸೆಲ್ ಟ್ರೇ, ಎಲೆಕ್ಟ್ರಿಕ್ ಫೋಲ್ಡಿಂಗ್ ವಿಂಗ್ ಮಿರರ್‌ಗಳು, ಸ್ವಯಂಚಾಲಿತ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್ ಚಕ್ರಗಳನ್ನು ಒದಗಿಸಲಾಗಿದೆ.

ಸುರಕ್ಷತೆಗಾಗಿ ಇದು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರ್, 4 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರೇರ್‌ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ. ಕಂಪನಿಯು ನವೀಕರಿಸಿದ ಹುಂಡೈ ಗ್ರಾಂಡ್ i10 ನಿಯೋಸ್ ಅನ್ನು ಜನವರಿ 2023 ರಲ್ಲಿ ಬಿಡುಗಡೆ ಮಾಡಿದೆ. ಇದು ಕೆಲವು ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆದುಕೊಂಡಿದೆ.

ಗ್ರಾಂಡ್ ಐ10 ನಿಯೋಸ್ ಬೆಲೆ 5.69 ಲಕ್ಷದಿಂದ 8.47 ಲಕ್ಷದವರೆಗೆ ಇದೆ. ಇದನ್ನು ಐದು ಟ್ರಿಮ್‌ಗಳಲ್ಲಿ ಪಡೆಯಬಹುದು. ಎರಾ, ಮಂಗಾ, ಸ್ಪೋರ್ಟ್ಸ್‌ ಎಕ್ಸಿಕ್ಯೂಟಿವ್, ಸ್ಪೋರ್ಟ್ಸ್‌ ಮತ್ತು ಆಸ್ಟಾ. ಇದರಲ್ಲಿ ಸಿಎನ್‌ಜಿ ಆಯ್ಕೆಯನ್ನೂ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read