ಅಗತ್ಯಕ್ಕೆ ಅನುಗುಣವಾಗಿ ರುದ್ರಾಕ್ಷಿ ಧರಿಸಿ

ಹಿಂದೂ ಧರ್ಮದಲ್ಲಿ, ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು  ಪರಿಗಣಿಸಲಾಗಿದೆ. ಈಶ್ವರನ ಕಣ್ಣೀರಿನಿಂದ ರುದ್ರಾಕ್ಷಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದರಿಂದ, ವ್ಯಕ್ತಿಯು ಶಿವನಿಂದ ಆಶೀರ್ವಾದ ಪಡೆಯುತ್ತಾನೆಂಬ ನಂಬಿಕೆಯಿದೆ. ರುದ್ರಾಕ್ಷಿಯನ್ನು ವಿಜ್ಞಾನದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ಅನೇಕ ರೋಗಗಳನ್ನು ತಡೆಯುತ್ತದೆ. ಜಾತಕದ ಅನೇಕ ದೋಷಗಳನ್ನು ಹೋಗಲಾಡಿಸುವಲ್ಲಿ ರುದ್ರಾಕ್ಷಿ ನೆರವಾಗುತ್ತದೆ.

ರುದ್ರಾಕ್ಷಿಯು ಒಂದು ಮುಖದಿಂದ ಹದಿನಾಲ್ಕು ಮುಖಗಳವರೆಗೆ ಇರುತ್ತದೆ. ಪ್ರತಿಯೊಂದು ರುದ್ರಾಕ್ಷಿಗೂ ತನ್ನದೇ ಆದ ಮಹತ್ವವಿದೆ. ಒಬ್ಬ ವ್ಯಕ್ತಿಯು ತನ್ನ ಇಚ್ಛೆ ಅಥವಾ ಅಗತ್ಯಕ್ಕೆ ಅನುಗುಣವಾಗಿ ರುದ್ರಾಕ್ಷಿಯನ್ನು ಧರಿಸಬೇಕು.

ಸಂಪತ್ತನ್ನು ಪಡೆಯಲು ಹನ್ನೆರಡು ಮುಖ ರುದ್ರಾಕ್ಷಿ, ಸಂತೋಷ, ಮೋಕ್ಷ ಮತ್ತು ಪ್ರಗತಿಯನ್ನು ಪಡೆಯಲು ಒಂದು ಮುಖ ರುದ್ರಾಕ್ಷಿ, ಐಶ್ವರ್ಯವನ್ನು ಪಡೆಯಲು ತ್ರಿಮುಖ ರುದ್ರಾಕ್ಷಿ ಧರಿಸಬೇಕು.

ಆದ್ರೆ, ರುದ್ರಾಕ್ಷಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಕೆಲವೊಂದು ನಿಯಮ ಪಾಲನೆ ಮಾಡಬೇಕು. ನಿಯಮ ತಪ್ಪಿದ್ರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಯಾವಾಗಲೂ ರುದ್ರಾಕ್ಷಿಯನ್ನು ಕೆಂಪು ಅಥವಾ ಹಳದಿ ದಾರದಲ್ಲಿ ಧರಿಸಬೇಕು. ಕಪ್ಪು ದಾರದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ಅಶುಭ.

ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಸ್ನಾನದ ನಂತರ ಅದನ್ನು ಧರಿಸಬೇಕು.

ರುದ್ರಾಕ್ಷಿಯನ್ನು ಧರಿಸುವಾಗ ಓಂ ನಮಃ ಶಿವಾಯ ಮಂತ್ರ ಜಪಿಸಬೇಕು. ಅಪ್ಪಿತಪ್ಪಿಯೂ ಕೊಳಕು ಕೈಗಳಿಂದ ರುದ್ರಾಕ್ಷಿಯನ್ನು ಮುಟ್ಟಬಾರದು.

ಬೇರೆಯವರು ಧರಿಸಿರುವ ರುದ್ರಾಕ್ಷಿಯನ್ನು ಧರಿಸಬಾರದು. ನಿಮ್ಮ ರುದ್ರಾಕ್ಷಿಯನ್ನು ಬೇರೆಯವರಿಗೆ ಧರಿಸಲು ನೀಡಬಾರದು. 27 ಮಣಿಗಳಿಗಿಂತ ಕಡಿಮೆ ಇರುವ ರುದ್ರಾಕ್ಷಿ ಮಾಲೆಯನ್ನು ಧರಿಸಬಾರದು. ಅದರಲ್ಲಿರುವ ಮಣಿಗಳ ಸಂಖ್ಯೆ ಬೆಸವಾಗಿರಬೇಕು.

ರುದ್ರಾಕ್ಷಿಯನ್ನು ಧರಿಸುವವರು ಮಾಂಸಾಹಾರ, ಮದ್ಯವನ್ನು ಎಂದಿಗೂ ಸೇವಿಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read