ಅಕ್ರಮ – ಸಕ್ರಮ ನಿವೇಶನ ಯೋಜನೆಯಡಿ ಹಕ್ಕುಪತ್ರ ಪಡೆದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಅಕ್ರಮ – ಸಕ್ರಮ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದವರಿಗೆ ಸರ್ಕಾರ ಕೊನೆಗೂ ಗುಡ್ ನ್ಯೂಸ್ ನೀಡಿದೆ. ನಿವೇಶನ ಹಕ್ಕು ಪತ್ರವನ್ನು ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಈಗ ಅವಕಾಶ ಮಾಡಿಕೊಡಲಾಗಿದೆ.

ಈ ಮೊದಲು ಯೋಜನೆಯಡಿ ನಿವೇಶನ ಹಕ್ಕುಪತ್ರ ಪಡೆದವರಿಗೆ ಇದನ್ನು ಅಡಮಾನ ಮಾಡಬಾರದೆಂಬ ಷರತ್ತನ್ನು ವಿಧಿಸಲಾಗಿತ್ತು. ಅಲ್ಲದೆ ಇದನ್ನು ಹಕ್ಕುಪತ್ರದಲ್ಲಿ ಸಹ ಮುದ್ರಿಸಲಾಗಿತ್ತು. ಹೀಗಾಗಿ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆಯಲು ಹೋದರೆ ತೊಂದರೆಯಾಗುತ್ತಿತ್ತು.

ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ ಇದೀಗ ಗೃಹ ನಿರ್ಮಾಣ ಅಡಮಾನ ಸಾಲಕ್ಕೆ ಯಾವುದೇ ನಿರ್ಬಂಧ ವಿಧಿಸದೆ ಬ್ಯಾಂಕಿನಲ್ಲಿ ಸಾಲ ನೀಡುವಂತೆ ಆದೇಶ ಹೊರಡಿಸಲಾಗಿದೆ. ಹೀಗಾಗಿ ಅಕ್ರಮ – ಸಕ್ರಮ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ಬ್ಯಾಂಕುಗಳಿಂದ ಅಡಮಾನ ಸಾಲ ಪಡೆಯುವ ಅವಕಾಶ ಲಭ್ಯವಾದಂತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read