ಆರೋಗ್ಯಕರ ಅಂಜೂರದ ಹಲ್ವಾ ಸವಿದು ನೋಡಿ

ಹಲ್ವಾ ಎಂದರೆ ಯಾರಿಗಿಷ್ಟವಿಲ್ಲ ಹೇಳಿ…? ರುಚಿಯಾದ ಹಲ್ವಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ಒಣ ಅಂಜೂರದ ಹಲ್ವಾ ಮಾಡುವ ವಿಧಾನ ಇದೆ. ಮಾಡಿ ನೋಡಿ.

ಬೇಕಾಗುವ ಸಾಂಗ್ರಿಗಳು:

15-20 –ಬಾದಾಮಿ (ಸಿಪ್ಪೆ ತೆಗದುಕೊಳ್ಳಿ), 200 ಗ್ರಾಂ-ಅಂಜೂರ, 5 ಟೇಬಲ್ ಸ್ಪೂನ್-ತುಪ್ಪ, ½ ಕಪ್-ಹಾಲಿನ ಪುಡಿ, 4 ಟೇಬಲ್ ಸ್ಪೂನ್-ಸಕ್ಕರೆ, ¼ ಟೀ ಸ್ಪೂನ್-ಏಲಕ್ಕಿ ಪುಡಿ.

ಮಾಡುವ ವಿಧಾನ:

ಸಿಪ್ಪೆ ತೆಗೆದ ಬಾದಾಮಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ 2 ಕಪ್ ನೀರನ್ನು ಬಿಸಿಮಾಡಿಕೊಂಡು ಅದಕ್ಕೆ ಅಂಜೂರ ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಂಡು ನೀರನ್ನು ಬಸಿದುಕೊಂಡು ಮಿಕ್ಸಿಯಲ್ಲಿ ರುಬ್ಬಿರಿ.

ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಬಾದಾಮಿ ಪುಡಿ ಸೇರಿಸಿ 2 ನಿಮಿಷಗಳ ಕಾಲ ಮಿಕ್ಸ್ ಮಾಡಿ. ಇದಕ್ಕೆ ರುಬ್ಬಿದ ಅಂಜೂರದ ಮಿಶ್ರಣ ಸೇರಿಸಿ ನಂತರ ಹಾಲಿನ ಪುಡಿ, ಸಕ್ಕರೆ, ½ ಕಪ್ ನೀರು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಏಲಕ್ಕಿ ಪುಡಿ ಸೇರಿಸಿದರೆ ರುಚಿಕರವಾದ ಅಂಜೂರದ ಹಲ್ವಾ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read