ʼಮೊಡವೆʼ ಸಮಸ್ಯೆ ನಿವಾರಿಸಲು ಈ ನೀರಿನಿಂದ ಮುಖ ತೊಳೆದು ನೋಡಿ

ಹೆಚ್ಚಾಗಿ ಹೊರಗಡೆ ಓಡಾಡುವುದರಿಂದ ವಾತಾವರಣದಲ್ಲಿರುವ ಧೂಳು, ಕೊಳೆ ಮುಖದಲ್ಲಿ ಕುಳಿತು ಮೊಡವೆ ಹಾಗೂ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡುತ್ತವೆ. ಇವುಗಳು ನಿವಾರಣೆಯಾಗಲು ಪ್ರತಿದಿನ ಈ ನೀರಿನಿಂದ ಮುಖವನ್ನು ವಾಶ್ ಮಾಡಿ.

ಕಹಿ ಬೇವಿನ ಎಲೆಗಳು ರುಚಿಯಲ್ಲಿ ತುಂಬಾ ಕಹಿಯಾಗಿದ್ದರೂ, ಇವು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಬ್ಯಾಕ್ಟೀರಿಯಾ, ವೈರಸ್ ನಿರೋಧಕ, ಉರಿಯೂತ ನಿವಾರಕ, ನಂಜು ನಿವಾರಕ ಗುಣಗಳಿವೆ. ಹಾಗಾಗಿ ಈ ಎಲೆಗಳಿಂದ ಅಲರ್ಜಿ, ಗುಳ್ಳೆ, ಮೊಡವೆಗಳನ್ನು ನಿವಾರಿಸಬಹುದು.

ಕಹಿ ಬೇವಿನ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತಣ್ಣಗಾಗಿಸಿ ಆ ನೀರಿನಿಂದ ಪ್ರತಿದಿನ ಮುಖ ತೊಳೆಯಿರಿ. ಇದರಿಂದ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ಮುಖದ ಅಂದ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read