ಸದಾ ʼಫಿಟ್ʼ ಆಗಿರಲು ತಪ್ಪದೆ ಮಾಡಿ ಈ ಯೋಗಾಭ್ಯಾಸ

ಫಿಟ್ ಆಗಿರಬೇಕೆಂಬ ಬಯಕೆ ಯಾರಿಗಿಲ್ಲ ಹೇಳಿ. ಇದನ್ನು ಸಾಧಿಸುವುದು ಹೇಗೆಂದು ಪ್ರಯತ್ನಿಸಿ ಸೋತು ಹೋಗಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ ಸರಳವಾದ ಒಂದಷ್ಟು ಯೋಗಾಭ್ಯಾಸಗಳನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಬೋಟ್ ಭಂಗಿ ಅಥವಾ ನೌಕಾಸನ ಮಾಡಿ. ನೆಲದ ಮೇಲೆ ಕುಳಿತು ಕಾಲುಗಳನ್ನು ಉದ್ದಕ್ಕೆ ಚಾಚಿ. ದಂಡಾಸನದಲ್ಲಿ ಕುಳಿತುಕೊಳ್ಳಿ. ಮೊಣಕಾಲನ್ನು ಬಗ್ಗಿಸಿ, ಪಾದಗಳನನ್ನು ನೆಲದಿಂದ ಮೇಲೆತ್ತಿ. ಕೈಗಳು ಕಾಲುಗಳ ಹಿಂದಿರಲಿ. ಕಾಲನ್ನು ಬಗ್ಗಿಸದಿರಿ. ಸಾಧ್ಯವಾದಷ್ಟು ನೇರವಾಗಿ ಹಿಡಿದುಕೊಳ್ಳಿ.

ಬೆನ್ನು ನೇರವಾಗಿರಲಿ. ಹೊಟ್ಟೆ ಒಳಗೆ ಹೊರಗೆ ಹೋಗುವಂತೆ ಉಸಿರಾಡಿ. ಇದನ್ನು ಗ್ಯಾಪ್ ಕೊಟ್ಟು ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ. ಹರ್ನಿಯಾ ಮೊದಲಾದ ಸಮಸ್ಯೆಯಿದ್ದರೆ ಈ ಆಸನ ಮಾಡದಿರಿ.

ಕುಂಭಾಸನ ಸರಳವೆಂದು ಕಂಡರೂ ಮಾಡಲು ಕಠಿಣವಾದ ಆಸನವೇ. ವಜ್ರಾಸನದಲ್ಲಿ ಕುಳಿತು ದೇಹದ ಭಾರವನ್ನು ಮುಂದೆ ತನ್ನಿ. ಮಾರ್ಜಾಲ ಭಂಗಿ ಮಾಡಿ. ಭುಜದ ನೇರಕ್ಕೆ ಕೈ ಮತ್ತು ಸೊಂಟದ ನೇರಕ್ಕೆ ಮೊಣಕಾಲಿರಲಿ. ಈಗ ಮೊಣಕಾಲನ್ನು ಮೇಲಕ್ಕೆತ್ತಿ. ಬೆನ್ನು ತಲೆ ನೇರವಾಗಿರಲಿ. ಹದಿನೈದು ನಿಮಿಷ ಇದನ್ನು ಮಾಡಿ. ದೇಹ ಭಾಗಗಳಲ್ಲಿ ನೋವಿದ್ದರೆ ಇದನ್ನು ಕಡೆಗಣಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read