ʼಹಲ್ಲುʼಗಳ ಹೊಳಪಿಗೆ, ಬಲವಾದ ಒಸಡು ಪಡೆಯಲು ಸೇವಿಸಿ ಈ ಆಹಾರ

ಹೊಳೆಯುವ ಹಲ್ಲುಗಳಿಗಾಗಿ ಹಲವರು ಪದೇ ಪದೇ ಚಿಕಿತ್ಸೆಯ ಮೊರೆ ಹೋಗುತ್ತಾರೆ ಅಥವಾ ರಾಸಾಯನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಇದು ದುಷ್ಪರಿಣಾಮ ಬೀರಬಹುದು.

ಹೊಳೆಯುವ ಹಲ್ಲುಗಳು ಮತ್ತು ಬಲವಾದ ಒಸಡುಗಳಿಗಾಗಿ ಮದ್ದು ನಮ್ಮ ಆಹಾರದಲ್ಲೇ ಇದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಹೊಳೆಯುವ ಹಲ್ಲುಗಳನ್ನು ಪಡೆಯಬಹುದು.

ಡೈರಿ ಉತ್ಪನ್ನ

ಮೊಸರು, ಹಾಲು, ಚೀಸ್‌ನಂತಹ ಡೈರಿ ಉತ್ಪನ್ನಗಳು ಕ್ಯಾಲ್ಷಿಯಂ, ರಂಜಕ ಮತ್ತು ಪ್ರೋಟಿನ್‌ನ ಅತ್ಯುತ್ತಮ ಮೂಲಗಳಾಗಿವೆ. ದಂತ ಮತ್ತು ಹಲ್ಲುಗಳನ್ನು ಬಲವಾಗಿಡಲು ಇದು ಅವಶ್ಯಕ.

ಸ್ಟ್ರಾಬೆರಿ

ಹಲ್ಲುಗಳನ್ನು ಬಿಳುಪುಗೊಳಿಸಲು ಇದು ಅತ್ಯುತ್ತಮ. ಸ್ಟ್ರಾಬೆರಿಗಳು ಮ್ಯಾಲಿಕ್‌ ಆಸಿಡ್‌ ಎಂಬ ಕಿಣ್ವವನ್ನು ಹೊಂದಿರುತ್ತವೆ. ಇದು ಹಲ್ಲುಗಳನ್ನು ಬಿಳಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಕಿತ್ತಳೆ ಮತ್ತು ಅನಾನಸ್‌

ಸಿಟ್ರಿಕ್‌ ಹಣ್ಣುಗಳಾದ ಕಿತ್ತಳೆ ಮತ್ತು ಅನಾನಸ್‌ ತಿನ್ನುವುದು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು. ಈ ಹುಳಿ ಹಣ್ಣುಗಳು ಶುಚಿಗೊಳಿಸುವ ಗುಣಗಳನ್ನು ಹೊಂದಿವೆ ಮತ್ತು ನೈಸರ್ಗಿಕವಾಗಿ ಬಾಯಿಯಿಂದ ಪ್ಲೇಕ್‌ ಅನ್ನು ತೊಳೆಯುತ್ತದೆ.

ಸೇಬು

ಬಾಯಿಯನ್ನು ಶುದ್ಧೀಕರಿಸುತ್ತದೆ ಮತ್ತು ಹಲ್ಲುಗಳ ನಡುವೆ ಸಿಲುಕಿರುವ ಆಹಾರ ಕಣಗಳನ್ನು ತೊಳೆಯುತ್ತದೆ. ಇದು ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read