ʼಸ್ವಪ್ನʼದಲ್ಲಿ ಸಂಭೋಗ ಬೆಳೆಸಿದಂತೆ ಕಂಡ್ರೆ ಏನರ್ಥ ಗೊತ್ತಾ…..?

ಪ್ರತಿಯೊಬ್ಬ ವ್ಯಕ್ತಿಗೆ ಮಲಗಿದ್ದಾಗ ಕನಸು ಬೀಳುತ್ತದೆ. ಕೆಲ ಸ್ವಪ್ನಗಳು ಕೆಟ್ಟದಾಗಿದ್ದರೆ ಮತ್ತೆ ಕೆಲ ಸ್ವಪ್ನಗಳು ಮನಸ್ಸಿಗೆ ಖುಷಿ ನೀಡುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯ ನಿದ್ರೆಯಲ್ಲಿ ಕಾಣುವ ಕನಸಿಗೂ, ಭವಿಷ್ಯದಲ್ಲಿ ನಡೆಯುವ ಘಟನೆಗೂ ಸಂಬಂಧವಿರುತ್ತದೆ. ಕೆಲವು ಸ್ವಪ್ನಗಳು ಮನುಷ್ಯನ ಆರ್ಥಿಕ ವೃದ್ಧಿ ಬಗ್ಗೆ ಹೇಳುತ್ತವೆ.

ಶಾಸ್ತ್ರದ ಪ್ರಕಾರ, ಸ್ವಪ್ನದಲ್ಲಿ ಸಣ್ಣ ಮಗು ನಡೆದಾಡುತ್ತಿದ್ದಂತೆ ಕಂಡ್ರೆ ಅಥವಾ ಹಣ್ಣಿನ ಗೊಂಚಲು ಕಂಡ್ರೆ ಇದು ಶುಭ ಸಂಕೇತ. ಶೀಘ್ರವೇ ಧನಲಾಭವಾಗುತ್ತದೆ ಎಂದರ್ಥ.

ಸ್ವಪ್ನದಲ್ಲಿ ಯಾವುದೇ ಪುರುಷ ಮಹಿಳೆ ಜೊತೆ ಅಥವಾ ಮಹಿಳೆ ಪುರುಷನ ಜೊತೆ ಶಾರೀರಿಕ ಸಂಬಂಧ ಬೆಳೆಸಿದಂತೆ ಕಂಡ್ರೆ ಮಂಗಳಕರ. ಆದಷ್ಟು ಬೇಗ ಧನ ಪ್ರಾಪ್ತಿಯಾಗಲಿದೆ ಎಂದರ್ಥ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಕಾಶದಲ್ಲಿ ಮಿಂಚು ಹೊಳೆದಂತೆ ಕಂಡ್ರೆ ಶುಭಕರ. ವಧುವಿನ ವಿದಾಯದ ಕ್ಷಣಗಳು ಕನಸಿನಲ್ಲಿ ಕಂಡ್ರೂ ಒಳ್ಳೆಯದು. ಸ್ವಪ್ನದಲ್ಲಿ ಮಾಂಸ ಕಂಡ್ರೂ ಮಂಗಳಕರ. ಭವಿಷ್ಯದಲ್ಲಿ ಧನಾಗಮನವಾಗಲಿದೆ ಎಂದರ್ಥ.

ಕನಸಿನಲ್ಲಿ ಗೋಧಿ ಬೆಳೆ ಕಂಡ್ರೆ ಮಂಗಳಕರ. ಅದೃಷ್ಟ ಒಲಿದು ಬರುತ್ತದೆ ಎಂದರ್ಥ. ಕನಸಿನಲ್ಲಿ ಯಾರಾದ್ರೂ ಸಾಲ ನೀಡಿದ್ರೆ ಅಥವಾ ಸಾಲವನ್ನು ಪಡೆದಂತೆ ಕಂಡ್ರೆ ಒಳ್ಳೆಯದು. ಹಸು ಸಗಣಿ ಹಾಕಿದಂತೆ ಕಂಡ್ರೂ ಮಂಗಳಕರ.

ಹಸಿರು ಕಾಡು, ಹೂವಿನ ತೋಟ ಸ್ವಪ್ನದಲ್ಲಿ ಕಂಡ್ರೂ ಶುಭಕರ. ವ್ಯಕ್ತಿ ಶೀಘ್ರವೇ ಧನವಂತನಾಗುತ್ತಾನೆಂದು ಅರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read