ʼಮೇಕಪ್ʼ ಕ್ಲೀನ್ ಮಾಡಲು ವೈಪ್ಸ್ ಬಳಸಿದರೆ ಏನಾಗುತ್ತದೆ ಗೊತ್ತಾ….?

ಮೇಕಪ್ ಮಾಡಿದ ಬಳಿಕ ಅದನ್ನು ತೆಗೆದು ಹಾಕಲು ಕೆಲವರು ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್(wipes)ನ್ನು ಬಳಸುತ್ತಾರೆ. ಆದರೆ ಈ ವೈಪ್ಸ್ ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವು ಸ್ಕಿನ್ ಸಮಸ್ಯೆಗಳು ಎದುರಾಗುತ್ತವೆ.

ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್ ಹಾನಿಕಾರಕ ರಾಸಾಯನಿಕಗಳಿಂದ ಮಾಡಲಾಗುತ್ತದೆ. ಇದು ಚರ್ಮದ ಪಿಹೆಚ್ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಇದು ಧೂಳು, ಕೊಳಕು ಮತ್ತು ಕಲ್ಮಶಗಳಿಂದ ಚರ್ಮವನ್ನು ರಕ್ಷಿಸುವ ಮತ್ತು ಚರ್ಮದ ತೇವಾಂಶವನ್ನು ಕಾಪಾಡುವ ಪದರವನ್ನು ತೆಗೆದು ಹಾಕುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಇದು ಚರ್ಮವನ್ನು ನಿರ್ಜಲೀಕರಣ ಮತ್ತು ಕಾಂತಿ ಹೀನವಾಗಿ ಮಾಡುತ್ತದೆ.

ಅಲ್ಲದೇ ಇದರಿಂದ ಕಣ್ಣಿನ ಮೇಕಪ್ ತೆಗೆದರೆ ಕಣ್ಣಿಗೆ ಹಾನಿಯುಂಟಾಗುತ್ತದೆ. ಕಣ್ಣಿನ ಚರ್ಮ ಸೂಕ್ಷ್ಮವಾಗಿರುವುದರಿಂದ ಅದರಲ್ಲಿರುವ ರಾಸಾಯನಿಕ ಕಣ್ಣಿನ ಚರ್ಮಕ್ಕೆ ಕಿರಿಕಿರಿಯನ್ನುಂಟು ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read