ʼಪಠಾಣ್ʼ ವಿರುದ್ಧದ ಪ್ರತಿಭಟನೆ ವಾಪಸ್: ವಿಶ್ವ ಹಿಂದೂ ಪರಿಷತ್ ಹೇಳಿಕೆ

VHP withdraws protest in Gujarat against 'Pathaan' after removal of ' objectionable' content - The New Indian Expressನಟ ಶಾರುಖ್‌ ಖಾನ್‌ ಅಭಿನಯದ ‘ಪಠಾಣ್‘ ಚಿತ್ರದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಾಗಿ ಗುಜರಾತ್ ನ ವಿಶ್ವ ಹಿಂದೂ ಪರಿಷತ್ ಘಟಕ ಹೇಳಿದೆ.

ಈಗಾಗಲೇ ಸೆನ್ಸಾರ್ ಮಂಡಳಿ ಆಕ್ಷೇಪಾರ್ಹ ಹಾಡಿನ ದೃಶ್ಯ, ಸಂಭಾಷಣೆ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದು ವಿಹೆಚ್‌ಪಿಯ ಕಾರ್ಯದರ್ಶಿ ಅಶೋಕ್ ರಾವಲ್ ಹೇಳಿದ್ದಾರೆ.

ಪಠಾಣ್ ಸಿನೆಮಾ ವಿರುದ್ಧ ಬುಧವಾರದಿಂದ ನಿರಂತರ ಪ್ರತಿಭಟನೆ ಮಾಡಲು ವಿಹೆಚ್‌ಪಿ ಉದ್ದೇಶಿಸಿತ್ತು. ಆದರೆ ಸೆನ್ಸಾರ್ ಮಂಡಳಿ ಆಕ್ಷೇಪಾರ್ಹ ವಿಷಯಗಳನ್ನು ತೆಗೆದು ಹಾಕಿರುವುದರಿಂದ ಬಲಪಂಥೀಯ ಸಂಘಟನೆ ಪ್ರತಿಭಟನೆ ಮಾಡಬೇಕೆಂಬ ನಿರ್ಧಾರವನ್ನ ಹಿಂದೆ ಪಡೆದಿದೆ.

ಚಿತ್ರದಲ್ಲಿನ ಬೇಶರಮ್ ರಂಗ್ ಹಾಡು ಸೇರಿದಂತೆ, ಆಕ್ಷೇಪಾರ್ಹ ವಿಷಯಗಳನ್ನು ತೆಗೆದು ಹಾಕಲಾಗಿದೆ. ಅಲ್ಲದೇ ಯಾವುದೇ ಸಮುದಾಯಕ್ಕೆ ನೋವು ಮಾಡುವಂತ ವಿಷಯಗಳಿದ್ದರೂ ಅದನ್ನೂ ತೆಗೆಯಲಾಗಿದೆ. ಇದೆಲ್ಲವೂ ತಾವು ಮಾಡುತ್ತಿದ್ದ ಪ್ರತಿಭಟನೆಯ ಪ್ರತಿಫಲ ಎಂದು ವಿಹೆ್‌ಪಿಯ ಕಾರ್ಯದರ್ಶಿ ಹೇಳಿದ್ದಾರೆ.

ಇವರ ಹೊರತಾಗಿ ಬಜರಂಗದಳ ಸಹ ಪ್ರತಿಭಟನೆ ಮಾಡಿತ್ತು. ಇದು ನಮ್ಮ ಎಲ್ಲ ಹಿಂದೂ ಸಂಘಟನೆಗಳ ಗೆಲುವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read