ʼನಾಟು ನಾಟುʼ ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರಿಯಿಂದ ಸ್ಟೆಪ್: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ನ ಜನಪ್ರಿಯ ಹಾಡು ‘ನಾಟು ನಾಟು’ಗೆ ಇದಾಗಲೇ ಹಲವರು ಡಾನ್ಸ್​ ಮಾಡಿದ್ದಾರೆ. ಇದೀಗ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಆಯುಕ್ತ ಚಾಂಗ್‌ ಜೇ-ಬೊಕ್‌ ಸೇರಿದಂತೆ ಎಲ್ಲ ಸಿಬ್ಬಂದಿ ಈ ಸೂಪರ್‌ಹಿಟ್‌ ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಅದರ ವಿಡಿಯೊ ವೈರಲ್​ ಆಗಿದೆ.

ಟ್ವಿಟರ್‌ನಲ್ಲಿನ ರಾಯಭಾರ ಕಚೇರಿಯ ಖಾತೆಯಲ್ಲಿ ಈ ನೃತ್ಯವನ್ನು ಪೋಸ್ಟ್‌ ಮಾಡಲಾಗಿದೆ. 25 ಲಕ್ಷಕ್ಕೂ ಅಧಿಕ ಟ್ವೀಟಿಗರು ಈ ವಿಡಿಯೋವನ್ನು ನೋಡಿದ್ದು, 30 ಸಾವಿರಕ್ಕೂ ಹೆಚ್ಚು ಮಂದಿ ಡ್ಯಾನ್ಸ್‌ಗೆ ಲೈಕ್‌ ಒತ್ತಿದ್ದಾರೆ. 5,500ಕ್ಕೂ ಹೆಚ್ಚು ಮಂದಿ ರಿಟ್ವೀಟ್‌ ಮಾಡಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊರಿಯಾ ರಾಯಭಾರ ಕಚೇರಿಯ ಈ ವಿಶೇಷ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಖಾತೆಗೆ ರಾಯಭಾರ ಕಚೇರಿಯ ವಿಡಿಯೋ ರಿಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ‘ಉತ್ಸಾಹಭರಿತ ಮತ್ತು ಮನಮೆಚ್ಚುವ ಯತ್ನವಿದು’ ಎಂದು ಬರೆದು ಥಮ್ಸ್‌ಅಪ್‌ ಚಿಹ್ನೆ ಹಾಕಿದ್ದಾರೆ. ಈ ಪ್ರತಿಕ್ರಿಯೆಗೆ ಕೊರಿಯಾ ಕಚೇರಿ ಧನ್ಯವಾದ ಸಲ್ಲಿಸಿದೆ.

https://twitter.com/RokEmbIndia/status/1629496880622342145?ref_src=twsrc%5Etfw%7Ctwcamp%5Etweetembed%7Ctwterm%5E1629496880622342145%7Ctwgr%5Eee87cc9146df220a3c3a967061b6597bd952bad5%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-korean-ambassador-and-embassy-staff-dance-to-naatu-naatu-pm-modi-reacts-3815193

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read