ʼಗರ್ಭಧಾರಣೆʼ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ ಈ ಆಹಾರ

ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಸೀಫುಡ್‌ ಸೇವನೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಅಧ್ಯಯನದ ವರದಿ ತಿಳಿಸಿದೆ.

ಮಕ್ಕಳ ನರ ರಚನೆ ಹಾಗೂ ಮಿದುಳಿನ ಬೆಳವಣಿಗೆಗಳು ಗರ್ಭಾವಸ್ಥೆಯಲ್ಲಿ ಆರಂಭವಾಗಲಿದ್ದು, ಒಮೆಗಾ-3 ಪೋಷಕಾಂಶಗಳ ಸೇವನೆ ಈ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಪಾತ್ರ ನಿರ್ವಹಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಪೋಷಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಸೀಫುಡ್ ಹೊಂದಿರುತ್ತದೆ. ವಿವಿಧ ಬಗೆಯ ಮೀನುಗಳ ಸೇವನೆ ಮಾಡಿದ ತಾಯಂದಿರ ಮಕ್ಕಳ ಬೆಳವಣಿಗೆ ವಿವಿಧ ರೀತಿಯ ಮಾನದಂಡಗಳ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿರುವುದಾಗಿ ಅಧ್ಯಯನದ ವೇಳೆ ಕಂಡು ಬಂದಿರುವುದಾಗಿ ವರದಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read