ಇಡೀ ಭಾರತ ಚಿತ್ರಲೋಕವೇ ತಿರುಗಿ ನೋಡುವಂತೆ ಮಾಡಿದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್ ಮಾಹಿತಿ ನೀಡಿದ್ದು,
95ನೇ ಆಸ್ಕರ್ ಪ್ರಶಸ್ತಿಗಳಿಗೆ ಅರ್ಹವಾಗಿರುವ ಚಲನಚಿತ್ರಗಳ ಪೈಕಿ ಕಾಂತಾರ ಸಿನಿಮಾ 2 ವಿಭಾಗಗಳಲ್ಲಿ ಅರ್ಹತೆ ಪಡೆದಿದೆ. ಚಿತ್ರಗಳ ಪಟ್ಟಿಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಪ್ರಕಟಿಸಿದೆ. ಒಟ್ಟು 301 ಚಲನಚಿತ್ರಗಳು 95ನೇ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿವೆ.
ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡ ಚಲನಚಿತ್ರ ಕಾಂತಾರ ಎರಡು ಆಸ್ಕರ್ ಅರ್ಹತೆಗಳನ್ನು ಪಡೆದಿದೆ. ಈ ಬಗ್ಗೆ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತಪಡಿಸಿದೆ.
‘ಕಾಂತಾರ’ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ! ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ಇದರೊಂದಿಗೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಹಿಂದಿಯ ಗಂಗೂಬಾಯಿ ಕಥಿಯಾವಾಡಿ, ಆರ್‌ಆರ್‌ಆರ್, ದಿ ಕಾಶ್ಮೀರ್ ಫೈಲ್ಸ್, ಚೆಲ್ಲೋ ಶೋ, ಇರವಿನ್ ನಿಜಾಲ್, ರಾಕೆಟ್ರಿ, ಮಿ ವಸಂತರಾವ್, ದಿ ನೆಕ್ಸ್ಟ್ ಮಾರ್ನಿಂಗ್ ಸೇರಿದಂತೆ ಹಲವಾರು ಭಾರತೀಯ ಚಲನಚಿತ್ರಗಳು 2023 ರ ಆಸ್ಕರ್‌ಗೆ ಅರ್ಹವಾದ ಚಲನಚಿತ್ರಗಳ ಜ್ಞಾಪನೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
https://twitter.com/hombalefilms/status/1612670954211274753?ref_src=twsrc%5Etfw%7Ctwcamp%5Etweetembed%7Ctwterm%5E1612670954211274753%7Ctwgr%5E0208019921d6e0d62a619ee6218b66ae180a301c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fzoom-epaper-zoom%2Fkantarareceives2oscarqualificationsgangubaikathiawadirrrthekashmirfilesinreminderlistofeligiblefilms-newsid-n460630364%3Fs%3Dauu%3D0x61fbe37283098391ss%3Dwspsm%3DY