ರಾಯಚೂರು: ಮನೆ ಮhಡಿ ಮೇಲೆ ಗಾಂಜಾ ಗಿಡ ಬೆಳೆದಿದ್ದ ಭೂಪನನ್ನು ಸಿಂಧನೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಉಗ್ರಾಣ ನಿಗಮದ ವಸತಿ ಸಮುಚ್ಛಯದ ಮಹಡಿಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಉಗ್ರಾಣ ನಿಗಮದ ನೌಕರ ಖಾದರ್ ಬಾಷಾನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಕರಿಯಪ್ಪ ಲೇಔಟ್ ಮಲ್ಲಯ್ಯ ದೇವಾಲಯದ ಸಮೀಪ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಸವರಾಜ್ ಸುಕಾಲಪೇಟೆ, ಕೃಷ್ಣ ಏಳುಮೈಲು ಕ್ಯಾಂಪ್ ಎಂಬುವರನ್ನು ಬಂಧಿಸಿ ಮಾದಕ ದ್ರವ್ಯದ 30 ಪ್ಯಾಕೆಟ್ ಗಳನ್ನು ಜಪ್ತಿ ಮಾಡಲಾಗಿದೆ.
