ಬೆಂಗಳೂರು: ಸ್ಟೆಲ್ಲಾರಿಸ್ ವೆಂಚರ್ ಪಾರ್ಟ್‌ನರ್ಸ್ ಸಹ-ಸಂಸ್ಥಾಪಕ ರಿತೇಶ್ ಬಾಂಗ್ಲಾನಿ ಇತ್ತೀಚೆಗೆ ತಮ್ಮ ಟ್ವಿಟ್ಟರ್ ನಲ್ಲಿ “ಟೆಕ್ಬ್ರೋ ಟೂರ್ ಆಫ್ ಬೆಂಗಳೂರು” ಎಂಬ ಬಗ್ಗೆ ಬರೆದುಕೊಂಡಿದ್ದಾರೆ. ಬೆಂಗಳೂರಿಗೆ ಹೋದಾಗ ಮಾಡಬೇಕಾದ ಕೆಲಸಗಳೇನು? ನೋಡಬೇಕಾದ ಸ್ಥಳಗಳು ಏನು ಎಂಬುದಾಗಿ ಅವರು ಕೇಳಿದ್ದಾರೆ.
“ಟೆಕ್ಬ್ರೋ ಬೆಂಗಳೂರಿನ ಪ್ರವಾಸಕ್ಕೆ” ಸ್ನೇಹಿತರನ್ನು ಕರೆದುಕೊಂಡು ಹೋಗಲು ಆಫರ್ ಮಾಡಿದ್ದೇನೆ. ಮಾಡಬೇಕಾದ ಕೆಲಸಗಳು ಯಾವುವು? ಏನನ್ನು ನೋಡಬಹುದು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬ್ಯಾಡ್ಮಿಂಟನ್ ಕೋರ್ಟ್‌ಗೆ ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ ಎಂದು ಕೆಲವರು ಹೇಳಿದ್ದರೆ, “ಕೋರಮಂಗಲ/ಇಂದಿರಾನಗರ/ಎಚ್‌ಎಸ್‌ಆರ್‌ನಲ್ಲಿರುವ ಸ್ಟಾರ್ಟ್‌ಅಪ್ ಕಚೇರಿಗಳ ಸುತ್ತಲೂ ಗೂಫಿಂಗ್, ಥರ್ಡ್‌ವೇವ್ ದರ್ಶನ್, ಮೊಕೋಬರಾ ಬ್ಯಾಗ್ ಪಡೆಯುವುದು, ಜನರೇಟಿವ್ ಎಐ ಮೀಟಪ್, ಪಬ್‌ಗಳಲ್ಲಿ ಕುಡಿಯುವುದು, ಕ್ಯಾಬ್ ಬುಕಿಂಗ್ ಇವೆಲ್ಲವೂ ರೋಚಕವಾಗಿದೆ ಎಂದು ಒಬ್ಬ ಬಳಕೆದಾರ ಬರೆದಿದ್ದಾನೆ.
“ಕೋರಮಂಗಲದ ಮೂರನೇ ಸ್ಟೇಜ್ನಲ್ಲಿ ಕಾಫಿ ಕುಡಿಯಿರಿ ಎಂದು ಇನ್ನೊಬ್ಬ ಬರೆದಿದ್ದು, ಹೀಗೆ ಹಲವು ಸ್ಥಳಗಳ ಕುರಿತು ಮಾಹಿತಿ ನೀಡುತ್ತಲೇ ಇದ್ದಾರೆ.
https://twitter.com/banglani/status/1663804652574605314?ref_src=twsrc%5Etfw%7Ctwcamp%5Etweetembed%7Ctwterm%5E1663804652574605314%7Ctwgr%5E680446cd98eb539362259eb811657671be877a91%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fstart-with-internets-hilarious-response-to-start-up-investors-tweet-about-bengaluru-tour-4084671