alex Certify ICC ಟಿ20 ವಿಶ್ವಕಪ್ ಗೆಲ್ಲೋದ್ಯಾರು ಗೊತ್ತಾ…? ಇಲ್ಲಿದೆ ಸಖತ್ ಇಂಟ್ರೆಸ್ಟಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ICC ಟಿ20 ವಿಶ್ವಕಪ್ ಗೆಲ್ಲೋದ್ಯಾರು ಗೊತ್ತಾ…? ಇಲ್ಲಿದೆ ಸಖತ್ ಇಂಟ್ರೆಸ್ಟಿಂಗ್ ಮಾಹಿತಿ

ICC ಪುರುಷರ T20 ವಿಶ್ವಕಪ್ 2021 ಅನ್ನು ಯಾರು ಗೆಲ್ಲುತ್ತಾರೆ? ಎನ್ನುವುದೇ ಕ್ರಿಕೆಟ್ ಲೋಕದಲ್ಲೀಗ ಭಾರೀ ಕುತೂಹಲದ ಪ್ರಶ್ನೆಯಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಗೆ ಪ್ರವೇಶ ಪಡೆದಿವೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಗಿಯುವ ಹಂತದತ್ತ ಬಂದಿದ್ದು, ಈ ವಿಶ್ವಕಪ್ ನಲ್ಲಿ ಅನೇಕ ಅಚ್ಚರಿಯ ಫಲಿತಾಂಶಗಳು ಬಂದಿವೆ. ನಿರೀಕ್ಷಿತ ತಂಡಗಳು ಹೊರ ನಡೆದಿವೆ. ಹೆಚ್ಚಿನವರು ಈ ವರ್ಷ ಟೀಂ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಹೇಳಿದ್ದರೂ, ಭಾರತ ತಂಡ ಅಂತಿಮ ಸೂಪರ್ 12 ಪಂದ್ಯ ಆಡುವ ಮೊದಲೇ ಅಂತಿಮ ನಾಲ್ಕರ ಸ್ಪರ್ಧೆಯಿಂದ ಹೊರಗುಳಿದಿದೆ.

ಅಂತೆಯೇ, ವೆಸ್ಟ್ ಇಂಡೀಸ್‌ಗೆ ಹಲವಾರು ಕ್ರಿಕೆಟ್ ತಜ್ಞರು ಬೆಂಬಲ ನೀಡಿದ್ದರು. ವಿಂಡೀಸ್ ಕೂಡ ನಿರಾಸೆ ಅನುಭವಿಸಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಾಲ್ಕು ತಂಡಗಳು ಸೆಮಿಫೈನಲ್ ಗೆ ಪ್ರವೇಶ ಪಡೆದಿವೆ. ವಿಶ್ವಕಪ್ ಗೆಲ್ಲಲು ಈ ತಂಡಗಳು ಭಾರಿ ಕಾರ್ಯತಂತ್ರವನ್ನೇ ರೂಪಿಸಿವೆ.

ಅಂತೆಯೇ, ಗ್ರೂಪ್ 2 ರಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ಅತ್ಯಂತ ಅಪಾಯಕಾರಿ ತಂಡವಾಗಿದೆ. ಪಂದ್ಯಾವಳಿಯಲ್ಲಿ ಏಕೈಕ ಅಜೇಯ ತಂಡವಾಗಿರುವ ಪಾಕ್ ಸೂಪರ್ 12 ಅನ್ನು ಕೊನೆಗೊಳಿಸುವ ಮೊದಲು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನೂ ಸೋಲಿಸಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹಿನ್ನಡೆ ಕಂಡರೂ ಅವಕಾಶ ಬಳಸಿಕೊಂಡು ಸೆಮಿಫೈನಲ್ ಪ್ರವೇಶಿಸಿವೆ.

ಸೆಮಿಸ್‌ನಲ್ಲಿ ಪ್ರತಿ ನಾಲ್ಕು ತಂಡಗಳ ಬಗ್ಗೆ ವಿಶ್ಲೇಷಣೆ ಇಲ್ಲಿದೆ:

1 ಸಾಮರ್ಥ್ಯಗಳು:

ಎ)ಇಂಗ್ಲೆಂಡ್: ಸುಸಜ್ಜಿತ ತಂಡ ಇಂಗ್ಲೆಂಡ್‌ನ ದೊಡ್ಡ ಶಕ್ತಿಯೆಂದರೆ ಆಟದ ವಿಧಾನದ ಬಗ್ಗೆ ಸ್ಪಷ್ಟತೆ. ತಂಡದ ಬ್ಯಾಟರ್‌ಗಳು ಅವರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಅವರು ಹೊಂದಿರುವ ಕೌಶಲ್ಯದ ಆಧಾರದ ಮೇಲೆ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ. ಈಗ ಕಷ್ಟದ ಪಂದ್ಯಗಳನ್ನು ಕೂಡ ಸುಲಭವಾಗಿ ಗೆಲ್ಲುವ ಚಾಕಚಕ್ಯತೆಯನ್ನು ಇಂಗ್ಲೆಂಡ್ ಅಭ್ಯಾಸ ಮಾಡಿಕೊಂಡಿದೆ.

ಅಗ್ರ ಕ್ರಮಾಂಕದ ಕುಸಿತದ ಹೊರತಾಗಿಯೂ ಇಂಗ್ಲೆಂಡ್ ಯಾವುದೇ ಮೊತ್ತವನ್ನು ಬೆನ್ನಟ್ಟಲು ಸಿದ್ಧವಾಗಿದೆ. ಇಂಗ್ಲೆಂಡ್ ತಂಡದಲ್ಲಿ ಗುಣಮಟ್ಟದ ವೇಗಿಗಳು, ಬೌಲಿಂಗ್ ಮಾಡುವ ಬ್ಯಾಟರ್‌ಗಳು ಮತ್ತು ಬ್ಯಾಟಿಂಗ್ ಮಾಡುವ ಬೌಲರ್‌ಗಳು ಇದ್ದಾರೆ. ಎಲ್ಲ ವಿಭಾಗಗಳಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡವಾಗಿದೆ.

ಬಿ) ಆಸ್ಟ್ರೇಲಿಯಾ- ಆಸ್ಟ್ರೇಲಿಯಾ ಹಿಂದೆಂದೂ ಟಿ20 ವಿಶ್ವಕಪ್ ಗೆದ್ದಿಲ್ಲವಾದರೂ, ಗೆಲುವಿಗೆ ಬೇಕಾದ ಎಲ್ಲಾ ಅರ್ಹತೆ ಹೊಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಹಿನ್ನಡೆ ಕಂಡರೂ ಬ್ಯಾಟಿಂಗ್ ಬಲವನ್ನು ಕಡೆಗಣಿಸುವಂತಿಲ್ಲ. ಆಸೀಸ್ ಬ್ಯಾಟಿಂಗ್ ಬಲಿಷ್ಠವಾಗಿದೆ. ಬ್ಯಾಟರ್ ಗಳು ಕರಾರುವಾಕ್ಕಾದ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮಿಚೆಲ್ ಸ್ಟಾರ್ಕ್ ಜೊತೆಗೆ ಬೌಲಿಂಗ್ ವಿಭಾಗದಲ್ಲಿ ಆಡಮ್ ಝಂಪಾ ಅವರ ಫಾರ್ಮ್ ಆಸೀಸ್‌ಗೆ ಮತ್ತೊಂದು ದೊಡ್ಡ ಪ್ಲಸ್ ಆಗಲಿದೆ.

ಸಿ) ಪಾಕಿಸ್ತಾನ- ಪಾಕಿಸ್ತಾನ ತಂಡ ಮೌನವಾಗಿ ಕಾರ್ಯತಂತ್ರ ರೂಪಿಸುತ್ತಿದೆ. ಮೈದಾನದಲ್ಲಿ ಉತ್ತಮ ನಡವಳಿಕೆ ಹೊಂದಿದ ಪಾಕ್ ವಿಶ್ವಕಪ್‌ ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ಜಯಗಳಿಸಿತ್ತು. ಕೊನೆಯ ಕ್ಷಣದಲ್ಲಿ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದ ನ್ಯೂಜಿಲೆಂಡ್‌ ಗೆ ಕೂಡ ತಿರುಗೇಟು ನೀಡಿತ್ತು. ಪಾಕ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಬಾಬರ್ ಆಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಶೋಯೆಬ್ ಮಲಿಕ್ ಕೂಡ ಒಂದೆರಡು ಉತ್ತಮ ಇನ್ನಿಂಗ್ಸ್‌ ನೊಂದಿಗೆ ಗಮನಸೆಳೆದಿದ್ದಾರೆ. ಪಾಕ್ ತಂಡದ ಬೌಲಿಂಗ್ ಪಡೆ ಬಲಿಷ್ಠವಾಗಿದೆ.

ಡಿ) ನ್ಯೂಜಿಲೆಂಡ್- ನ್ಯೂಜಿಲೆಂಡ್‌ ಏಳು ಬೀಳುಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದೆ. ಉತ್ತಮ ಪ್ರದರ್ಶನ ನೀಡುವಾಗಲೇ ನ್ಯೂಜಿಲೆಂಡ್ ಕೆಲವೊಮ್ಮೆ ದಿಢೀರ್ ಹಿನ್ನಡೆ ಕಾಣುತ್ತದೆ. ಕೇನ್ ವಿಲಿಯಮ್ಸನ್ ಚಾಣಾಕ್ಷತೆಯಿಂದ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ಕಿವೀಸ್ ದುರ್ಬಲವಾಗಿ ಕಾಣಿಸಬಹುದು. ಆದರೆ, ಅಚ್ಚರಿ ಫಲಿತಾಂಶವನ್ನು ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.

2 ದೌರ್ಬಲ್ಯಗಳು-

ಎ) ಇಂಗ್ಲೆಂಡ್- ಜೇಸನ್ ರಾಯ್‌ಗೆ ಗಾಯವಾಗಿರುವುದು ಬದಲಾವಣೆಗೆ, ಹಿನ್ನಡೆಗೆ ಕಾರಣವಾಗಬಹುದು. ಹೆಚ್ಚಿನ ಒತ್ತಡದ ಪರಿಸ್ಥಿತಿಯಲ್ಲಿ ಅವರ ಮಧ್ಯಮ ಕ್ರಮಾಂಕವು ನೆರವಿಗೆ ಬಂದಿಲ್ಲ. ನಾಕೌಟ್ ಪಂದ್ಯದ ಆರಂಭದಲ್ಲಿ ಎದುರಾಳಿ ತಂಡದವರು ಅವರ ಕೆಲವು ವಿಕೆಟ್‌ಗಳನ್ನು ಪಡೆದರೆ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.

ಬಿ) ಆಸ್ಟ್ರೇಲಿಯಾ- ಆಸ್ಟ್ರೇಲಿಯಾದ ಸಮಸ್ಯೆಯೇನೂ ಗಂಭೀರವಾಗಿದೆ ಎನ್ನುವಂತಿಲ್ಲ. ಅವರು ಟಿ20 ವಿಶ್ವಕಪ್ ಗೆದ್ದಿಲ್ಲ. ಕೆಲವೊಮ್ಮೆ ಸುರಕ್ಷಿತ ವಿಧಾನ ಅನುಸರಿಸಲು ಹೋಗಿ ಹಿನ್ನಡೆ ಕಂಡಿದೆ. ಕೆಲವೊಮ್ಮೆ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುತ್ತದೆ.

ಸಿ) ಪಾಕಿಸ್ತಾನ- ಫಖರ್ ಜಮಾನ್ ಮತ್ತು ಮೊಹಮ್ಮದ್ ಹಫೀಜ್ ಅವರು ನಿರೀಕ್ಷಿತ ಕೊಡುಗೆ ನೀಡಿಲ್ಲ. ಅದರ ಹೊರತಾಗಿ ಪಾಕಿಸ್ತಾನವು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡಿದೆ.

ಡಿ) ನ್ಯೂಜಿಲೆಂಡ್- ಜೇಮ್ಸ್ ನೀಶಮ್ ಅವರು ಗ್ಲೆನ್ ಫಿಲಿಪ್ಸ್ ಜೊತೆಗೆ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಕೆಲವು ಪವರ್ ಹಿಟ್ಟಿಂಗ್ ಅಗತ್ಯವಿರುವ ಪಂದ್ಯಗಳಲ್ಲಿ ಗುಣಮಟ್ಟದ ದಾಳಿಯ ಸಂಘಟಿಸಿಲ್ಲ ಎನ್ನಬಹುದು.

3 ಅವಕಾಶಗಳು-

ಎ) ಇಂಗ್ಲೆಂಡ್- 2019 ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಇಂಗ್ಲೆಂಡ್‌ಗೆ ಟಿ20 ವಿಶ್ವಕಪ್ ಗೆಲ್ಲಲು ದೊಡ್ಡ ಅವಕಾಶ ಇದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ಅತ್ಯುತ್ತಮ ವೈಟ್ ಬಾಲ್ ತಂಡವಾಗಿದೆ. ಇದು ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಕ್ಷಣವಾಗಲಿದೆ.

ಬಿ) ಆಸ್ಟ್ರೇಲಿಯಾ- ಈಗಾಗಲೇ 5 ಏಕದಿನ ವಿಶ್ವಕಪ್‌ ಹೊಂದಿರುವ ಆಸ್ಟ್ರೇಲಿಯಾಕ್ಕೆ ಈ ವರ್ಷ ತಮ್ಮ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಬೃಹತ್ ಅವಕಾಶ ಇದಾಗಿದೆ. ಆಸ್ಟ್ರೇಲಿಯ ತಂಡ ಈ ಅವಕಾಶ ಬಳಸಿಕೊಳ್ಳಲು ಸಜ್ಜಾಗಿದೆ.

ಸಿ)ಪಾಕಿಸ್ತಾನ- ಪಾಕಿಸ್ತಾನ ಗಂಭೀರವಾದ ಕ್ರಿಕೆಟ್ ರಾಷ್ಟ್ರವೆಂದು ಜಗತ್ತಿಗೆ ತಿಳಿಸಲು ಇದೊಂದು ಅವಕಾಶ ಎಂದು ಭಾವಿಸಿದೆ. ಪಾಕ್ ವಿಶ್ವಕಪ್ ಗೆದ್ದರೆ, ಟಿ20 ಜೊತೆಗೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೂ ಯುವಕರ ಪಡೆ ಕಟ್ಟಲು ದೊಡ್ಡ ಉತ್ತೇಜನ ನೀಡುತ್ತದೆ. ಟಿ20 ಪಾಕ್ ತಂಡಕ್ಕೆ ಸೂಕ್ತವಾದ ಸ್ವರೂಪವಾಗಿದೆ. ಈ ಬಾರಿ ಅವರಿಗೆ ಉತ್ತಮ ಅವಕಾಶವಿದೆ.

ಡಿ)ನ್ಯೂಜಿಲೆಂಡ್- ನ್ಯೂಜಿಲೆಂಡ್‌ಗೆ ಇದೊಂದು ದೊಡ್ಡ ಅವಕಾಶ, ಏಕದಿನ ವಿಶ್ವಕಪ್‌ನ ಫೈನಲ್‌ ತಲುಪಿ ನಿರಾಸೆ ಅನುಭವಿಸಿದ್ದ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಗೆದ್ದಿತು. ಈಗ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ ಒದಗಿ ಬಂದಿದೆ.

4 ಸವಾಲುಗಳು

ಎ)ಇಂಗ್ಲೆಂಡ್- ಈ ಪಂದ್ಯಾವಳಿಯಲ್ಲಿ ನಾಯಕ ಇಯಾನ್ ಮಾರ್ಗನ್ ಅವರ ಫಾರ್ಮ್ ಕೊರತೆಯೇ ಹಿನ್ನಡೆಯಾದಂತಿದೆ. ಅವರು ಟೂರ್ನಿಯಲ್ಲಿ ಉತ್ತಮ ಕೊಡುಗೆ ನೀಡಿಲ್ಲ. ಅಗ್ರ ಕ್ರಮಾಂಕದವರ ಜೊತೆಗೆ ಉಳಿದವರು ಕೊಡುಗೆ ನೀಡಬೇಕಕಿದೆ.

ಬಿ) ಆಸ್ಟ್ರೇಲಿಯಾ- ಡೇವಿಡ್ ವಾರ್ನರ್ ಮತ್ತು ಆರನ್ ಫಿಂಚ್ ಭರ್ಜರಿ ಪ್ರದರ್ಶನ ನೀಡಿದಾಗ ಕಾಂಗರೂಗಳು ಸಂಪೂರ್ಣವಾಗಿ ವಿಭಿನ್ನ ತಂಡವಾಗಿ ಕಾಣುತ್ತಾರೆ. ನಾಕೌಟ್ ಪಂದ್ಯಗಳಲ್ಲಿ ಅವರ ಫಾರ್ಮ್ ನಿರ್ಣಾಯಕವಾಗಿದೆ. ಒಮ್ಮೆ ಅವರು ಸ್ಟೀವ್ ಸ್ಮಿತ್ ಅವರನ್ನು ಆರಂಭದಲ್ಲಿ ಕರೆ ತಂದರೆ, ಆಸೀಸ್ ಗೆ ಬಲ ಬರಬಹುದು.

ಸಿ)ಪಾಕಿಸ್ತಾನ- ಪಾಕಿಸ್ತಾನಕ್ಕೆ ಎರಡು ಸಂದರ್ಭಗಳಲ್ಲಿ ಮಾತ್ರ ಮಧ್ಯಮ ಕ್ರಮಾಂಕದ ಬಲ ನೆರವಿಗೆ ಬಂದಿದೆ. ಮಲಿಕ್ ಅವರೊಂದಿಗೆ ಆಸಿಫ್ ಅಲಿಯ ಭರವಸೆ ತಂಡಕ್ಕಿದೆ, ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಅಗ್ರ ತಂಡಗಳ ವಿರುದ್ಧ ಪಾಕ್ ಪ್ರತಿರೋಧ ತೋರುವ ಅಗತ್ಯವಿದೆ.

ಡಿ)ನ್ಯೂಜಿಲೆಂಡ್- ನ್ಯೂಜಿಲೆಂಡ್ ಸ್ವತಃ ವೇಗದ ಬೌಲಿಂಗ್‌ನ ಶ್ರೇಷ್ಠ ಆಟಗಾರರ ತಂಡವೆಂದು ಹೆಸರುವಾಸಿಯಾಗಿದೆ. ಯುಎಇಯಲ್ಲಿನ ಪರಿಸ್ಥಿತಿ ಬಹುಶಃ ಸ್ಪಿನ್ ಬೌಲಿಂಗ್‌ನ ವಿರುದ್ಧವಾಗಿರಬಹುದು. ಆದರೂ ಇದನ್ನು ದೌರ್ಬಲ್ಯ ಎಂದು ಕರೆಯಲಾಗದು. ವಿಲಿಯಮ್ಸನ್ ಮತ್ತು ಡೆವೊನ್ ಕಾನ್ವೆ ಅವರಂತಹ ಬ್ಯಾಟರ್‌ಗಳು ಗುಣಮಟ್ಟ ಕಾಯ್ದುಕೊಂಡಿದ್ದಾರೆ.

ತೀರ್ಮಾನ:

ಎಲ್ಲಾ ನಾಲ್ಕು ತಂಡಗಳು ಪ್ರಬಲವಾಗಿ ಕಂಡುಬಂದರೂ, ಫೈನಲ್ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಬರಬಹುದೆಂದು ಕಾಣುತ್ತವೆ. ಅದು ಸಾಧ್ಯವಾದಲ್ಲಿ ಎರಡು ರಾಷ್ಟ್ರಗಳ ನಡುವಿನ 21 ಟಿ20 ಪಂದ್ಯಗಳಲ್ಲಿ 14 ಅನ್ನು ಗೆದ್ದಿರುವ ಇಂಗ್ಲೆಂಡ್‌ಗೆ ಅನುಕೂಲವಾಗಬಹುದು(ಪಾಕಿಸ್ತಾನ ಕೇವಲ ಆರು ಗೆಲುವು ಕಂಡಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲ) ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...