alex Certify ಕೊಹ್ಲಿ – ರೋಹಿತ್ ಪೈಕಿ ತನ್ನಿಷ್ಟದ ಆಟಗಾರನ ಹೆಸರೇಳಿದ ಕ್ರಿಕೆಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ – ರೋಹಿತ್ ಪೈಕಿ ತನ್ನಿಷ್ಟದ ಆಟಗಾರನ ಹೆಸರೇಳಿದ ಕ್ರಿಕೆಟರ್

ಭಾರತ ಕ್ರಿಕೆಟ್ ತಂಡವನ್ನು ಅಸಾಧಾರಣ ಮಟ್ಟಕ್ಕೆ ತಂದು ನಿಲ್ಲಿಸಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪೈಕಿ ಯಾರ ಬ್ಯಾಟಿಂಗ್ ಇಷ್ಟ ಎಂಬ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ರಿಂದ ಅಚ್ಚರಿ ಉತ್ತರ ಬಂದಿದೆ.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ನ ಎಲ್ಲ ಮಾದರಿಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದಾರೆ ಎಂಬುದು ಒಪ್ಪಿಕೊಂಡಂತೆಯೇ, ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅನ್ನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ.

ರೋಹಿತ್ ಹಾಗೂ ವಿರಾಟ್ ಇಬ್ಬರಿಗೂ ಕ್ರಿಕೆಟ್ ನಲ್ಲಿ ಸಾಕಷ್ಟು ಭವಿಷ್ಯವಿದೆ. ಇಬ್ಬರೂ ಬಹಳ‌ ‌ನಿರೀಕ್ಷೆ ಇಡಬಹುದಾದ ಬ್ಯಾಟ್ಸ್ ಮನ್ ಗಳು. ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತ. ಏಕದಿನ ಪಂದ್ಯ ಹಾಗೂ ಟಿ-ಟ್ವೆಂಟಿಯಲ್ಲಿ ಅವರು ಬುದ್ಧಿವಂತ ಆಟಗಾರ. ಆದರೆ ಕೊಹ್ಲಿ ಹಾಗೂ ಶರ್ಮಾ ನಡುವೆ ಯಾರು ಬೆಸ್ಟ್ ಎಂಬ ಆಪ್ಶನ್ ಬಂದಾಗ ನಾನು ರೋಹಿತ್ ಶರ್ಮಾ ಬ್ಯಾಟಿಂಗ್ ನೋಡಲು ಹೆಚ್ಚು ಇಷ್ಟಪಡುತ್ತೇನೆ ಎಂದು ಕೈಫ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...