alex Certify ರಾಹುಲ್ ದ್ರಾವಿಡ್ ಕೋಪಗೊಂಡಿದ್ದನ್ನು ನೋಡಿದ್ದೀರಾ…? ಇಲ್ಲಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ದ್ರಾವಿಡ್ ಕೋಪಗೊಂಡಿದ್ದನ್ನು ನೋಡಿದ್ದೀರಾ…? ಇಲ್ಲಿದೆ ವಿಡಿಯೋ

Rahul Dravid Has Anger Issues? Cricket's Gentleman 'Wreaks Havoc' in Traffic Jam in Viral Video

ಜಂಟಲ್‌ಮನ್‌ಗಳ ಆಟ ಕ್ರಿಕೆಟ್‌ಗೆ ಪರ್ಫೆಕ್ಟ್‌ ರಾಯಭಾರಿ ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುವ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದರೆ ಆಟವನ್ನು ಇಷ್ಟಪಡುವ ಪ್ರತಿಯೊಬ್ಬ ಅಭಿಮಾನಿಗೂ ವಿಶೇಷ ಗೌರವ. ದ್ರಾವಿಡ್‌ ಆಟದ ಅಂಗಳದಲ್ಲೇ ಆಗಲಿ, ಹೊರಗಾಗಲಿ ಕೋಪಗೊಂಡು ಮಾತನಾಡಿದ್ದನ್ನು ಯಾರೂ ಕಂಡೇ ಇಲ್ಲ ಎನ್ನಬಹುದಾದಷ್ಟು ಸೆನ್ಸಿಬಲ್ ವ್ಯಕ್ತಿ.

ಎದುರಾಳಿ ಆಟಗಾರರು ತಮ್ಮನ್ನು ಸ್ಲೆಡ್ಜ್ ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸಲು ತಲೆ ಕೆಡಿಸಿಕೊಳ್ಳದ ವ್ಯಕ್ತಿಯಾದ ’ವಾಲ್’ ಕೋಪಗೊಂಡು ಕೂಗಾಡಿದರೆ ಹೇಗಿರುತ್ತೆ ಎಂದು ಊಹಿಸಿದ್ದೀರಾ…?

IPL ಉದ್ಘಾಟನೆ ಪಂದ್ಯದಲ್ಲೇ ಮುಂಬೈ ಮಣಿಸಿದ RCB ಗೆ ಭರ್ಜರಿ ಜಯ

ಪೇಮೆಂಟ್ಸ್‌ ಅಪ್ಲಿಕೇಶನ್ ’ಕ್ರೆಡ್‌’ನ ಜಾಹೀರಾತಿನ ಕಂಟೆಂಟ್ ಒಂದರಲ್ಲಿ ದ್ರಾವಿಡ್‌ ಅವರು ಸಂಚಾರ ದಟ್ಟಣೆಯಲ್ಲಿ ಸಿಲುಕಿದಾಗ ಕಿರಿಕಿರಿಯಾಗಿ ಸುತ್ತಲಿನ ಸಹ ಸಂಚಾರರ ಮೇಲೆ ಕೂಗಾಡಿ ತಮ್ಮ ಬ್ಯಾಟ್‌ನಿಂದ ದಾಂಧಲೆ ಮಾಡುವ ದೃಶ್ಯವೊಂದನ್ನು ಇಡಲಾಗಿದೆ. ದ್ರಾವಿಡ್‌ ಹೀಗೂ ಇರಲು ಸಾಧ್ಯವೇ ಎಂದು ಅಚ್ಚರಿಗೊಂಡ ನೆಟ್ಟಿಗರು ಈ ವಿಡಿಯೋವನ್ನು ಸಖತ್ತಾಗಿ ಶೇರ್‌ ಮಾಡಿದ್ದು, ಅವರ ಈ ’ಕೋಪಿಷ್ಠ’ ಮುಖ ಸಹ ಸಖತ್‌ ಕ್ಯೂಟ್ ಆಗಿದೆ ಎಂದಿದ್ದಾರೆ.

ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಈ ವಿಡಿಯೋಗೆ ಪ್ರತಿಕ್ರಿಯಿಸಿ, “ರಾಹುಲ್ ಅಣ್ಣ ಯಾವತ್ತೂ ಈ ರೀತಿ ಇದ್ದಿದ್ದನ್ನು ಕಂಡೇ ಇಲ್ಲ” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...