alex Certify ಡಕ್ ಔಟ್ ಆದ ನಂತರ ಊಟ ಮಾಡುತ್ತಿದ್ದ ಪೃಥ್ವಿ ಷಾ ಗೆ ನೆಟ್ಟಿಗರಿಂದ ಕ್ಲಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಕ್ ಔಟ್ ಆದ ನಂತರ ಊಟ ಮಾಡುತ್ತಿದ್ದ ಪೃಥ್ವಿ ಷಾ ಗೆ ನೆಟ್ಟಿಗರಿಂದ ಕ್ಲಾಸ್

Prithvi Shaw Mercilessly Trolled for Having a Meal After Getting Out for Zero Against CSK

ಷಾರ್ಜಾ: ಶನಿವಾರದ ಚೆನ್ನೈ ಸೂಪರ್ ಕಿಂಗ್ಸ್ ಜತೆ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಡಕ್ ಔಟ್ ಆದ ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಷಾ ಫುಲ್ ಟ್ರೋಲ್ ಗೆ ಒಳಗಾಗಿದ್ದಾರೆ. ಅವರು ಡ್ರೆಸ್ಸಿಂಗ್ ರೂಂಗೆ ಹೋಗಿ ಊಟ ಮಾಡುತ್ತಿದ್ದ ವಿಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಗರು ಷಾ ರನ್ನು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿ.ಎಸ್.ಕೆ.ಯಿಂದ 180 ರನ್ ಗಳ ಗುರಿ ಪಡೆದ ದೆಹಲಿ ಟೀಮ್ ನ ಪರವಾಗಿ ಓಪನರ್ ಆಗಿ ಕಣಕ್ಕಿಳಿದ ಭಾರತೀಯ ಅಂಡರ್ 19 ಟೀಂ ಕ್ಯಾಪ್ಟನ್ ಆಗಿದ್ದ ಪೃಥ್ವಿ, ಬೌಲರ್ ದೀಪಕ್‌ ಚಹಾರ್ ಎರಡನೇ ಬೌಲ್ ಗೆ ಕ್ಯಾಚ್ ಕೊಟ್ಟು ಔಟ್ ಆದರು.ಶಿಖರ್ ಧವನ್ ಹಾಗೂ ಅಕ್ಸರ್ ಪಟೇಲ್ ಭರ್ಜರಿ ಬ್ಯಾಟಿಂಗ್ ಮಾಡಿ ದೆಹಲಿ ತಂಡವನ್ನು ಗೆಲುವಿನ ಬಾಗಿಲಿಗೆ ತಂದರು ಎನ್ನಿ.

ಆದರೆ, 2.4 ಓವರ್ ಹೊತ್ತಿಗೆ ದೆಹಲಿ 13/1 ಸ್ಕೋರ್ ನಲ್ಲಿದ್ದಾಗ ಕ್ಯಾಮರಾ ಡ್ರೆಸ್ಸಿಂಗ್ ರೂಂ ಕಡೆ ಪ್ಯಾನಲ್ ಆಗುತ್ತದೆ. ಆಗ ಪೃಥ್ವಿ ಊಟ ಮಾಡುತ್ತಿರುವುದು ಕಾಣುತ್ತದೆ. ಆ ಫೋಟೋವನ್ನಿಟ್ಟುಕೊಂಡು ನೆಟ್ಟಿಗರು ಟ್ರೋಲ್ ಸುರಿಮಳೆ ಹರಿಸಿದ್ದಾರೆ. ಅವರು ಬೇಸರ ಮಾಡಿಕೊಂಡು ಕುಳಿತ ಫೋಟೋ ಜತೆ ಈ ಫೋಟೋ ಸೇರಿಸಿ, ಅಮ್ಮ ಬೈದಾಗ, ಅಪ್ಪ ಬೈದಾಗ ಎಂದು ಗುರುತಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...