alex Certify ಟ್ವೀಟಿಗರಿಂದ ಟ್ರೋಲಿಗೊಳಗಾದ ಪಾಕ್ ನ್ಯೂಸ್​ ಚಾನೆಲ್​ಗಳು..! ಕಾರಣ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವೀಟಿಗರಿಂದ ಟ್ರೋಲಿಗೊಳಗಾದ ಪಾಕ್ ನ್ಯೂಸ್​ ಚಾನೆಲ್​ಗಳು..! ಕಾರಣ ಏನು ಗೊತ್ತಾ…?

ಕ್ರಿಕೆಟ್​ ನಾಯಕರು ತಮ್ಮ ನೆಚ್ಚಿನ ನಾಯಕನಿಗೆ ಮತವನ್ನ ಚಲಾಯಿಸಲು ಐಸಿಸಿ, ಟ್ವಿಟರ್​ ಬಳಕೆದಾರರಿಗೆ ಅವಕಾಶವೊಂದನ್ನ ನೀಡಿತ್ತು. ಈ ಟ್ವಿಟರ್​ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ನಡುವೆ ಭಾರೀ ಪೈಪೋಟಿ ಬಳಿಕ ಕೊನೆಗೂ ಈ ಸಮೀಕ್ಷೆಯಲ್ಲಿ ಇಮ್ರಾನ್​ ಖಾನ್​ ವಿಜಯಿಶಾಲಿಯಾದ್ರು.

ಈ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಪಾಕ್​ ಮಾಜಿ ನಾಯಕ ಹಾಗೂ ಈಗಿನ ಪ್ರಧಾನಿ ಇಮ್ರಾನ್​ ಖಾನ್​ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ಸ್​ ಹಾಗೂ ಆಸ್ಟ್ರೇಲಿಯಾ ನಾಯಕಿ ಮೆಗಿ ಲ್ಯಾನಿನ್​ ಅವರನ್ನ ಐಸಿಸಿ ನಾಮ ನಿರ್ದೇಶನ ಮಾಡಿತ್ತು.

ಕೊಹ್ಲಿ ಹಾಗೂ ಇಮ್ರಾನ್ ಖಾನ್​ ನಡುವೆ ಈ ಸಮೀಕ್ಷೆಯಲ್ಲಿ ಭಾರೀ ಪೈಪೋಟಿ ಉಂಟಾಯ್ತು. ಕೊನೆಗೂ ಕೊಹ್ಲಿಯನ್ನ ಸರಿಗಟ್ಟಿ 47.3 ಪ್ರತಿಶತ ಮತಗಳನ್ನ ಪಡೆಯುವ ಮೂಲಕ ಇಮ್ರಾನ್​ ಖಾನ್​ ಈ ಸಮೀಕ್ಷೆಯ ವಿನ್ನರ್​ ಎನಿಸಿಕೊಂಡ್ರು.

ಆದರೆ ಈ ಟ್ವಿಟರ್​ ಸಮೀಕ್ಷೆಯನ್ನೇ ದೊಡ್ಡದಾಗಿ ಮಾಡಿದ ಪಾಕ್​ ನ್ಯೂಸ್​ ಚಾನೆಲ್​ಗಳು ಬ್ರೇಕಿಂಗ್​ ನ್ಯೂಸ್​ ಹಾಗೂ ಪ್ಯಾನೆಲ್​ ಡಿಸ್ಕಷನ್​ ಮಾಡಿವೆ. ಇದನ್ನ ನೋಡಿದ ಭಾರತೀಯ ಟ್ವೀಟಿಗರು, ಟ್ವಿಟರ್​ ಸಮೀಕ್ಷೆಯನ್ನು ಇಷ್ಟು ದೊಡ್ಡ ವಿಚಾರ ಮಾಡೋದು ಬೇಕಿತ್ತಾ ಅಂತಾ ನಕ್ಕಿದ್ದಾರೆ.

— ICC (@ICC) January 12, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...