alex Certify BIG BREAKING: ಒಲಿಂಪಿಂಕ್ಸ್ ಉದ್ಘಾಟನೆ ವೀಕ್ಷಣೆ ವೇಳೆ ಎದ್ದು ನಿಂತು ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಒಲಿಂಪಿಂಕ್ಸ್ ಉದ್ಘಾಟನೆ ವೀಕ್ಷಣೆ ವೇಳೆ ಎದ್ದು ನಿಂತು ಕ್ರೀಡಾಪಟುಗಳನ್ನು ಹುರಿದುಂಬಿಸಿದ ಮೋದಿ

ನವದೆಹಲಿ: ಟೋಕಿಯೋ ರಾಜಧಾನಿ ಜಪಾನ್ ನಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಭಾರತದ ಕ್ರೀಡಾಪಟುಗಳು ಉದ್ಘಾಟನೆ ಸಮಾರಂಭದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದ್ದಾರೆ.

ಟಿವಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ವೀಕ್ಷಿಸುತ್ತಿದ್ದ ಮೋದಿ, ಭಾರತೀಯ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಎದ್ದುನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

.ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಗಳಾಗಿ ಬಾಕ್ಸರ್ ಮೇರಿಕೋಮ್, ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಹಾಗೂ 19 ಅಥ್ಲೀಟ್ ಗಳು ಭಾಗಿಯಾಗಿದ್ದಾರೆ. ಭಾರತದಿಂದ 125 ಅಥ್ಲೀಟ್ ಗಳು, ಕೋಚ್, ಸಿಬ್ಬಂದಿ ಸೇರಿ ಒಟ್ಟು 228 ಜನರ ತಂಡ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...